ಮಾತಾಡಲು ಬಿಡದ್ದಕ್ಕೆ ಪ್ರೇಯಸಿ ತಂದೆಗೆ ಚಾಕುವಿನಿಂದ ಇರಿದ ಯುವಕ
ಅನಗತ್ಯವಾಗಿ ಮಗಳಿಗೆ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ ಬಗ್ಗೆ ಆಕೆಯೇ ತಂದೆಗೆ ದೂರು ನೀಡಿದ್ದಳು. ಇದರ ಬಗ್ಗೆ ತಂದೆ ಯುವಕನಿಗೆ ಎಚ್ಚರಿಕೆ ನೀಡಿದ್ದರು.
ಇದರಿಂದ ಆಕ್ರೋಶಗೊಂಡ ಆರೋಪಿ ಯುವಕ, ಪ್ರೇಯಸಿಯ ತಂದೆ ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಬಂದು ಚಾಕುವನಿಂದ ಇರಿದಿದ್ದಾನೆ. ಸ್ಥಳೀಯರ ಕೈಗೆ ಸಿಕ್ಕಿಹಾಕಿಕೊಳ್ಳುವ ಮೊದಲೇ ಆತ ಘಟನಾ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.