ಉತ್ತರ ಪ್ರದೇಶ: ಅಲೆಕ್ಸಾ ಸಾಧನದಿಂದ ಮನೆಯೊಳಗೆ ನುಗ್ಗಿದ ಮಂಗಗಳ ದಾಳಿಯಿಂದ ಸಹೋದರಿಯನ್ನು 13 ವರ್ಷದ ಬಾಲಕಿ ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಬಗ್ಗೆ ವಿವರಿಸಿದ ಬಾಲಕಿ ನಿಖಿತಾ, ನಮ್ಮ ಮನೆಗೆ ಗಂಟೆಗಳ ಹಿಂದೆ ನೆಂಟರು ಬಂದಿದ್ದರು. ಅವರು ವಾಪಾಸ್ಸು ಹೋಗುವಾಗ ಗೇಟನ್ನು ಹಾಗೆಯೇ ತೆರೆದು ಹೋಗಿದ್ದಾರೆ. ಈ ವೇಳೆ ಮನೆಗೆ ಕೋತಿಗಳು ನುಗ್ಗಿ, ನಮ್ಮ ಮೇಲೆ ವಸ್ತುಗಳನ್ನು ಎಸೆಯಲು ಶುರು ಮಾಡಿದೆ. ತಂಗಿ ಹೆದರಿದ್ದು, ಕೋತಿಗಳಿಂದ ರಕ್ಷಿಸಿಕೊಳ್ಳಲು ಅಲೆಕ್ಸಾ ನೆರವು ಪಡೆದೆ. ಈ ವೇಳೆ ಅಲೆಕ್ಸಾ ಹತ್ತಿರ ನಾಯಿ ಬೊಗಳುವುದನ್ನು ಪ್ಲೇ ಮಾಡಲು ಕೇಳಿಕೊಂಡು. ಜೋರಾಗಿ ನಾಯಿ ಬೊಗಳುವಿಕೆಯ ಶಬ್ದದಿಂದಾಗಿ ಮಂಗಗಳು ಹೆದರಿ ಓಡಿಹೋದವು ಎಂದರು.
ನಿಕಿತಾ ಅವರ ಕ್ಷಿಪ್ರ ಕ್ರಮದಿಂದಾಗಿ ಮಂಗಗಳ ದಾಳಿಯಿಂದ ಬಾಲಕಿಯರಿಬ್ಬರೂ ಪಾರಾಗಿದ್ದಾರೆ ಎಂದು ನಿಕಿತಾ ತಾಯಿ ಶಿಪ್ರಾ ಓಜಾ ಹೇಳಿದ್ದಾರೆ.
ಪೋಷಕರು ಪ್ರತಿಕ್ರಿಯಿಸಿ, "ಅಲೆಕ್ಸಾ ಸಾಧನದ ಸದುಪಯೋಗದಿಂದ ಅವರ ಜೀವ ಉಳಿಸಲಾಗಿದೆ. ನಾವು ಇನ್ನೊಂದು ಕೋಣೆಯಲ್ಲಿದ್ದೆವು ಆದರೆ ಮಗಳು ನಿಕಿತಾ ಅವರ ಬುದ್ಧಿವಂತಿಕೆಯಿಂದಾಗಿ, ನಾಯಿಯ ಶಬ್ದವನ್ನು ಹೊರತರುವಂತೆ ಅಲೆಕ್ಸಾವನ್ನು ಕೇಳಿದಳು ಮತ್ತು ಮಂಗಗಳು ಓಡಿಹೋದವು ಎಂದು ಕೇಳಿದಳು" ಎಂದು ಅವರು ಹೇಳಿದರು.