ಸೀಗಡಿ ಬಿರಿಯಾನಿ ಮಾಡಿ ಸವಿಯಿರಿ

ಬುಧವಾರ, 25 ಜುಲೈ 2018 (15:34 IST)
ಬೆಂಗಳೂರು: ಚಿಕನ್, ಮೀನಿನಂತೆ ಸೀಗಡಿಯ ಬಿರಿಯಾನಿಯೂ ರುಚಿಕರವಾಗಿರುತ್ತದೆ. ಕಡಿಮೆ ಸಾಮಾಗ್ರಿಗಳಲ್ಲಿ ಬೇಗನೆ ತಯಾರಾಗುತ್ತದೆ. ಮಾಡುವ ಬಗೆ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿ
ಬಿರಿಯಾನಿ ಅಕ್ಕಿ 2 ಕಪ್, ಸೀಗಡಿ-ಕಾಲು ಕೆ.ಜಿ, ಟೊಮೆಟೊ-2 ಹದ ಗಾತ್ರದ್ದು, ಈರುಳ್ಳಿ-2 ದೊಡ್ಡದ್ದು, ಏಲಕ್ಕಿ-3, ಬೆಳ್ಳುಳ್ಳಿ-5-6 ಎಸಳು, ಕೊತ್ತಂಬರಿ ಸೊಪ್ಪು-1/2 ಕಟ್ಟು, ಕೆಂಪು ಮೆಣಸಿನ ಪುಡಿ-ಅರ್ಧ ಚಮಚ, ಗರಂ ಮಸಲಾ-ಕಾಲು ಚಮಚ, ಅರಿಶಿನ-ಕಾಲು ಚಮಚ, ಶುಂಠಿ-ಒಂದು ಸಣ್ಣ ತುಂಡು, ಚಕ್ಕೆ-ಚಿಕ್ಕ ತುಂಡು ತುಪ್ಪ-2 ಚಮಚ.


ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಕತ್ತರಿಸಿಕೊಂಡ ಈರುಳ್ಳಿ, ಏಲಕ್ಕಿ, ಚಕ್ಕೆ, ಬೆಳ್ಳುಳ್ಳಿ, ಶುಂಠಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಸೀಗಡಿ ಹಾಕಿ ತುಸು ಬಿಸಿಯಾದ ಮೇಲೆ ಅಕ್ಕಿ ಹಾಕಿ ಆಮೇಲೆ ಅಕ್ಕಿಯ ಎರಡರಷ್ಟು ನೀರು ಹಾಕಿ ಉಪ್ಪು, ಮೆಣಸಿನ ಪುಡಿ, ಗರಂ ಮಸಾಲ, ಅರಿಶಿನ ಹಾಕಿ ಬೇಯಲು ಬಿಡಿ. ಬೆಂದ ಪರಿಮಳ ಬಂದಾಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ