ಮದುವೆ ಊಟ ಮಾಡಿ ಹೊಟ್ಟೆ ಹಾಳಾಗಿದೆಯೇ? ಹಾಗಿದ್ದರೆ ಹೀಗೆ ಮಾಡಿ!

ಗುರುವಾರ, 14 ಡಿಸೆಂಬರ್ 2017 (08:38 IST)
ಬೆಂಗಳೂರು: ಮದುವೆ ಊಟ ಎಂದರೆ ನಾಲಿಗೆ ಕೇಳಲ್ಲ. ಉಣಬಡಿಸಿದ್ದನ್ನೆಲ್ಲಾ ಹೊಟ್ಟೆ ತುಂಬಾ ಉಣ್ಣುತ್ತೇವೆ. ಆದರೆ ನಂತರ ಹೊಟ್ಟೆ ಹಿಡಿದುಕೊಂಡು ಕೂರಬೇಕಾದ ಪರಿಸ್ಥಿತಿ ಬಂದರೆ ಏನು ಮಾಡಬೇಕು?
 

ವಾಂತಿ ಮಾಡಿ!
ಏನೇನೂ ಮಾಡಿದರೂ ಹೊಟ್ಟೆ ಕೇಳದಿದ್ದಾಗ ವಾಂತಿ ಮಾಡಿಬಿಡುವುದೇ ಒಳ್ಳೆಯದು. ಇದರಿಂದ ಹೊಟ್ಟೆಗೂ ಸಮಾಧಾನ. ನಿಮಗೂ ಆರಾಮ.

ಆದಷ್ಟು ಪಾನೀಯ ಸೇವನೆ ಮಾಡಿ
ಆದಷ್ಟು ನಿಮ್ಮ ಶರೀರವನ್ನು ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಿ. ಹದ ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿಕೊಂಡು ಆಗಾಗ ಕುಡಿಯುತ್ತಿರಿ.

ಪೊಟೇಷಿಯಂ ಆಹಾರ
ಪೊಟೇಷಿಯಂಯುಕ್ತ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಿ. ಬಾಳೆ ಹಣ್ಣು, ಸಿಹಿಗೆಣಸು, ಬಸಳೆ ಸೊಪ್ಪು ಸೇವನೆ ಮಾಡಿ.

ಬಿಸಿ ಚಹಾ ಸೇವಿಸಿ
ಇದು ಉತ್ತಮ ಕೆಲಸ. ಹೊಟ್ಟೆ ಕೆಟ್ಟು ಹೋಗಿದ್ದರೆ ಬಿಸಿ ಚಹಾಕ್ಕೆ ಬೇಕಿದ್ದರೆ ಸ್ವಲ್ಪ ಶುಂಠಿ ಸೇರಿಸಿಕೊಂಡು ಸೇವಿಸಿ. ಇದರಿಂದ ತಿಂದಿದ್ದು ಬೇಗ ಜೀರ್ಣವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ