ಇದನ್ನು ಸಾಮಾನ್ಯ ದಿನಗಳಲ್ಲಿ ಮತ್ತು ಅತಿಥಿಗಳು ಮನೆಗೆ ಬಂದಾಗ ವಿಶೇಷವಾಗಿ ತಯಾರಿಸಲು ಉತ್ತಮ ಆಯ್ಕೆ ಆಗುವುದು.
ನೀವು ಸಹ ಸರಳ ವಿಧಾನಗಳ ಮೂಲಕ ಮನೆಯಲ್ಲಿಯೇ ಮಟನ್ ಕುರ್ಮವನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು
1/2 ಕಿ.ಗ್ರಾಂ ಮಟನ್
• 1 ಕಪ್ ಮೊಸರು
• 3 ಚಮಚ ಜಿಂಜರ್ ಜ್ಯೂಸ್
• 3 ಚಮಚ ಬೆಳ್ಳುಳ್ಳಿ
• 1 ಕಪ್ fried onion
• 1 ಚಮಚ ಗರಂ ಮಸಾಲ ಪುಡಿ
• 2 ಚಮಚ ಖಾರದ ಪುಡಿ
• 2 - ಲವಂಗದ ಎಲೆ
• 2 - ಕಪ್ಪು ಏಲಕ್ಕಿ
• 2 - ಚಕ್ಕೆ
• 6 - ಹಸಿರು ಏಲಕ್ಕಿ
• 6 - ಲವಂಗ
• ಅಗತ್ಯಕ್ಕೆ ತಕ್ಕಷ್ಟು ಉಪ್ಪು
• ಅಗತ್ಯಕ್ಕೆ ತಕ್ಕಷ್ಟು ನೀರು
- ಒಂದು ಪಾತ್ರೆಯಲ್ಲಿ ಕುರಿ ಮಾಂಸ/ ಮಟನ್, ಶುಂಠಿ, ಬೆಳ್ಳುಳ್ಳಿ ನೀರು, ಮೊಸರು, ಮೆಣಸಿನ ಪುಡಿ, ಗರಮ್ ಮಸಾಲ ಮತ್ತು ಉಪ್ಪನ್ನು ಸೇರಿಸಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಗೊಳಿಸಿ.- ಮಿಶ್ರಣವು ಚೆನ್ನಾಗಿ ಮಿಶ್ರವಾಗಲು 4-5 ನಿಮಿಷಗಳ ಕಾಲ ಒಂದೆಡೆ ಇಡಿ.
- ಕುಕ್ಕರ್ ಪಾತ್ರೆಗೆ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.- ಬಿಸಿಯಾದ ಬಳಿಕ ಬೇ ಎಲೆ, ಗರಮ್ ಮಸಾಲ, ಅರ್ಧ ಬೌಲ್ ಕ್ಯಾರಮೈಸ್ಡ್ ಈರುಳ್ಳಿ ಮತ್ತು ಸ್ವಲ್ಪ ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಮಿಶ್ರಣವು ಚೆನ್ನಾಗಿ ಬೆರೆತು ಬೇಯಲು ಸ್ವಲ್ಪ ಸಮಯ ಬಿಡಿ.
- ಅದೇ ಕುಕ್ಕರ್ ಪಾತ್ರೆಗೆ ಮ್ಯಾರಿನೇಟ್ ಮಾಡಿದ ಮಟನ್ ಮಿಶ್ರಣ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಒಂದು ಅಥವಾ ಎರಡು ನಿಮಿಷಗಳ ಕಾಲ ಕುದಿಸಿ, ನಂತರ ಮುಚ್ಚಳವನ್ನು ಮುಚ್ಚಬೇಕು.- ಮಿಶ್ರಣವು ಚೆನ್ನಾಗಿ ಬೇಯಲು 5-6 ಸೀಟಿಯನ್ನು ಕೂಗಿಸಿ.
- ಮಟನ್ ಕುರ್ಮ ಸಿದ್ಧವಾದ ಬಳಿಕ ನಿಮ್ಮ ಆಯ್ಕೆಗೆ ಅನುಗುಣವಾಗಿ ಅನ್ನ ಅಥವಾ ರೊಟ್ಟಿಯೊಂದಿಗೆ ಸವಿಯಿರಿ.