10 ಮಂದಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಸೋಮವಾರ, 1 ಡಿಸೆಂಬರ್ 2008 (09:23 IST)
ಈ ಬಾರಿಯ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಹತ್ತುಮಂದಿ ಕನ್ನಡದ ಗಣ್ಯರು ಹಾಗೂ ಹೊರನಾಡ ಕನ್ನಡ ಸಂಸ್ಥೆಯೊಂದಕ್ಕೆ ಪ್ರದಾನ ಮಾಡಲಾಯಿತು.

ನಾಡೋಜ ದರೋಜಿ ಈರಮ್ಮ, ಗೊ.ರು.ಚನ್ನಬಸಪ್ಪ, ಡಾ.ಸಾ.ಶಿ.ಮರುಳಯ್ಯ, ಹೊಸ್ತೋಟ ಮಂಜುನಾಥ ಭಾಗವತ, ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಸದಾನಂದ ಸುವರ್ಣ, ಎ. ಈಶ್ವರಯ್ಯ, ವೈ.ಕೆ. ಮುದ್ದುಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ್, ಸಿರಿ ಅಜ್ಜಿ ಮತ್ತು ಬಹರೇನ್ ಕನ್ನಡ ಸಂಘಗಳು ಪ್ರಶಸ್ತಿಗೆ ಭಾಜವಾಗಿವೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಹರೈನ್ ಕನ್ನಡ ಸಂಘದ ಪರವಾಗಿ ಸಂಘದ ಅಧ್ಯಕ್ಷ ಆಯ್‌ಸ್ಟಿನ್ ಸಂತೋಷ್ ಪ್ರಶಸ್ತಿ ಸ್ವೀಕರಿಸಿದರು.

ಗೊ.ರು.ಚನ್ನಬಸಪ್ಪ, ಡಾ.ಸಾ.ಶಿ. ಮರುಳಯ್ಯ, ಲಕ್ಷ್ಮೀನಾರಾಯಣ ಭಟ್ಟ, ನಾಗತಿಹಳ್ಳಿ ಚಂದ್ರಶೇಖರ್ ಸನ್ಮಾನಿತರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು. ಬಹರೇನ್ ಕನ್ನಡ ಸಂಘದ ಅಧ್ಯಕ್ಷ ಆಯ್‌ಸ್ಟಿನ್ ಸಂತೋಷ್ ಅವರು ತಮ್ಮೊಂದಿಗೆ ಬಹರೈನ್ ರಾಜ ಲಾಂಛನವಾದ "ಖಡ್ಗ'ದ ಪ್ರತಿಕೃತಿಯೊಂದನ್ನು ನುಡಿಸಿರಿಯ ರೂವಾರಿ ಡಾ| ಎಂ.ಮೋಹನ್ ಆಳ್ವಾ ಅವರಿಗೆ ಹಸ್ತಾಂತರಿಸಿದರು.

ವೆಬ್ದುನಿಯಾವನ್ನು ಓದಿ