ಕಾನ್ಪುರ: ಇಂಗ್ಲೆಂಡ್ ವಿರುದ್ಧ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಸೋತಿರಬಹುದು. ಆದರೆ ಧೋನಿ, ಸುರೇಶ್ ರೈನಾ ಸೋಲಿನ ಪಂದ್ಯದಲ್ಲೂ ದಾಖಲೆ ಮಾಡಿ ಮಿಂಚಿದರು.
ಈ ಪಂದ್ಯದಲ್ಲಿ ಗರಿಷ್ಠ ಸ್ಕೋರರ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ವಿರುದ್ದ ಟಿ-ಟ್ವೆಂಟಿ ಪಂದ್ಯದಲ್ಲಿ ಗರಿಷ್ಠ ಸರಾಸರಿ (50 ಪ್ಲಸ್) ಹೊಂದಿದ ಮೊದಲ ಆಟಗಾರ ಎನಿಸಿಕೊಂಡರು. ವಿಶ್ವದ ಇತರ ಬ್ಯಾಟ್ಸ್ ಮನ್ ಗಳ ಪೈಕಿ ಇಂಗ್ಲೆಂಡ್ ವಿರುದ್ಧ ಗರಿಷ್ಠ ಸರಾಸರಿ ಹೊಂದಿದ ಐದನೇ ಬ್ಯಾಟ್ಸ್ ಮನ್ ಎನ್ನುವ ಗೌರವಕ್ಕೆ ಧೋನಿ ಪಾತ್ರರಾದರು.
ಸುರೇಶ್ ರೈನಾ ಟಿ-ಟ್ವೆಂಟಿ ಪಂದ್ಯಗಳಲ್ಲಿ ತಮ್ಮ ಎರಡನೇ ಗರಿಷ್ಠ ರನ್ (34) ಸ್ಕೋರ್ ಮಾಡಿದರು. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಅವರು 49 ರನ್ ಗಳಿಸಿದ್ದೇ ಗರಿಷ್ಠ ರನ್ ಆಗಿದೆ. ಯುವ ಬೌಲರ್ ಯಜುವೇಂದ್ರ ಚಾಹಲ್ ಟಿ-ಟ್ವೆಂಟಿ ಮಾದರಿಯಲ್ಲಿ ಜೀವನ ಶ್ರೇಷ್ಠ ಸಾಧನೆ ಮಾಡಿದರು. ಈ ಪಂದ್ಯದಲ್ಲಿ 27 ರನ್ ಕೊಟ್ಟು 2 ವಿಕೆಟ್ ಕಿತ್ತಿದ್ದಾರೆ.
ಮೊಯಿನ್ ಆಲಿ ಇದು ಮೂರನೇ ಬಾರಿ ಕಿರು ಮಾದರಿಯಲ್ಲಿ ಭಾರತದ ವಿರುದ್ಧ ಪಂದ್ಯ ಶ್ರೇಷ್ಠ ಪಡೆದ ದಾಖಲೆ ಮಾಡುತ್ತಿರುವುದು. ಇನ್ನು ಇಂಗ್ಲೆಂಡ್ ಭಾರತದ ವಿರುದ್ಧ ಕಿರು ಮಾದರಿಯಲ್ಲಿ ಗರಿಷ್ಠ ಅಂತರದಿಂದ ಗೆದ್ದ ಸಾಧನೆ ಮಾಡಿತು. ಇದರೊಂದಿಗೆ ಇಂಗ್ಲೆಂಡ್ ಭಾರತದ ವಿರುದ್ಧ ಆಡಿದ 9 ಟಿ-ಟ್ವೆಂಟಿ ಪಂದ್ಯಗಳ ಪೈಕಿ 6 ನ್ನು ಗೆದ್ದು ಬೀಗಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ