ವಿಶ್ವಕಪ್‌ನಲ್ಲಿ ಪಾಕ್‌ಗೆ ಟೀಂ ಇಂಡಿಯಾವನ್ನು ಸೋಲಿಸೋಕ್ಕೆ ಯಾಕಾಗ್ತಿಲ್ಲ ?

ಸೋಮವಾರ, 16 ಫೆಬ್ರವರಿ 2015 (19:16 IST)
ವಿಶ್ವಕಪ್‌ನಲ್ಲಿ  ಕಡು ಎದುರಾಳಿ ಭಾರತದ ವಿರುದ್ಧ ಸತತ 6 ಪಂದ್ಯಗಳ ಸೋಲಿಗೆ ಪಾಕಿಸ್ತಾನ ಉತ್ತರಗಳನ್ನು ಹುಡುಕುತ್ತಿರುವ ನಡುವೆ ಟಾಸ್‌ನಲ್ಲಿ ನಾಯಕನ ಅದೃಷ್ಟ ಕೈಕೊಟ್ಟು ರನ್ ಚೇಸ್ ಮಾಡಿದ್ದೇ ಸತತ ಸೋಲುಗಳಿಗೆ ಕಾರಣವೆಂದು ವಿಶ್ಲೇಷಣೆ ಮಾಡಲಾಗಿದೆ.
 
ಎಲ್ಲಾ ಐದು ಪಂದ್ಯಗಳಲ್ಲಿ ಪಾಕಿಸ್ತಾನ ಗುರಿಯನ್ನು ಮುಟ್ಟಲು ವಿಫಲವಾಯಿತು. ಭಾರತ ಎರಡನೆಯದಾಗಿ ಬ್ಯಾಟಿಂಗ್ ಮಾಡಿದ್ದು 2003ರ ಪಂದ್ಯದಲ್ಲಿ. ಆಗ ಸಚಿನ್ ಮನೋಜ್ಞ ಆಟದ ನೆರವಿನಿಂದ ಪಾಕಿಸ್ತಾನದಿಂದ ಜಯ ಕಸಿದುಕೊಂಡಿತು.
 
ಭಾರತಕ್ಕೆ ಟಾಸ್‌ನಲ್ಲಿ ಅದೃಷ್ಟದಿಂದಾಗಿ 6-0 ಸ್ಕೋರ್‌ನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಪಾಕಿಸ್ತಾನ ಮಾಜಿ ನಾಯಕ ಇನ್ಬಮಮ್ ಉಲ್ ಹಕ್‌ಗೆ ಮನದಟ್ಟಾಗಿದೆ.
 ಮೊದಲು ಬ್ಯಾಟಿಂಗ್ ಮಾಡುವುದು ಯಾವಾಗಲೂ ಅನುಕೂಲ. ಏಕೆಂದರೆ ದೊಡ್ಡ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್ ಒತ್ತಡಕ್ಕೆ ಸಿಲುಕುತ್ತಾರೆ ಎಂದು  ಇಂಜಮಮ್ ಅತಿಥಿ ಅಂಕಣದಲ್ಲಿ ಬರೆದಿದ್ದಾರೆ. 
 
ಭಾರತದ ವಿರುದ್ದ ರನ್ ಚೇಸ್ ಮಾಡುವಾಗ ಏನು ತಪ್ಪಾಗುತ್ತದೆಂದು ಸೂಕ್ತ ಪದ ನನಗೆ ಹೊಳೆದಿಲ್ಲ. ಆದರೆ ಇದು ಹೆಚ್ಚಾಗಿ ಆಟಗಾರರ ಮಾನಸಿಕ ಬ್ಲಾಕೇಜ್ ಎಂದು ನುಡಿದರು.ಪಾಕಿಸ್ತಾನ ಭಾರತದ ವಿರುದ್ಧ ಒಟ್ಟಾರೆ ಏಕದಿನ ಪಂದ್ಯಗಳಲ್ಲಿ ಮೇಲುಗೈ ಹೊಂದಿದ್ದು, 72 ಪಂದ್ಯಗಳು ಗೆದ್ದು, 51ರಲ್ಲಿ ಸೋತಿವೆ.

ಆದರೆ ವಿಶ್ವಕಪ್‌ನಲ್ಲಿ ಮಾತ್ರ ಸತತ 6 ಸೋಲುಗಳು ಅದಕ್ಕೆ ನೋವುಂಟುಮಾಡಿದೆ.ಧೋನಿ ಪಾಕಿಸ್ತಾನಕ್ಕೆ ಸಮಾಧಾನದ ಮಾತುಗಳನ್ನು ಆಡಿದ್ದಾರೆ. ಇದು ಕಾಯಂ ಉಳಿಯುವುದಿಲ್ಲ. ನಾವು ಅವರಿಗೆ ಸೋಲುವ ಸಮಯ ಬಂದರೂ ಬರಬಹುದು. ನಮ್ಮ ಜೀವಮಾನಪೂರ್ತಿ ಈ ದಾಖಲೆ ಉಳಿಯುವುದಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ