ಬ್ರೌನ್ ರೈಸ್‌ನ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು

ಸೋಮವಾರ, 15 ಅಕ್ಟೋಬರ್ 2018 (16:55 IST)
ಆಹಾರ ಪದಾರ್ಥಗಳನ್ನು ತಯಾರಿಸುವಾಗ ಅತಿಯಾಗಿ ಬಳಸುವುದು ಅಕ್ಕಿಯೇ. ಅದರಲ್ಲಿಯೂ ಕಂದು ಅಕ್ಕಿಯು ದೇಹಕ್ಕೆ ಬೇಕಾದ ಜೀವಕಾಂಶಗಳನ್ನು, ಫೈಬರ್, ಖನಿಜಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. 
* ಬ್ರೌನ್ ಅಕ್ಕಿಯು ಆಮ್ಲಜನಕ ಮುಕ್ತ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ. 
 
* ಬ್ರೌನ್ ಅಕ್ಕಿಯು ಸೂಪರ್‌ಆಕ್ಸೈಡ್ ಡಿಸ್ಮೊಟಿಸ್ ಎಂಬ ಪ್ರಮುಖ ಉತ್ಕರ್ಷಣ ನಿರೋಧಕ ಕಿಣ್ವವನ್ನು ಹೊಂದಿರುವುದರಿಂದ ಶಕ್ತಿ ಉತ್ಪಾದನೆಯ ಸಮಯದಲ್ಲಾಗುವ ಹಾನಿಗಳಿಂದ ರಕ್ಷಿಸುತ್ತದೆ.
 
* ಬ್ರೌನ್ ಅಕ್ಕಿಯಲ್ಲಿ ತೌಡಿನ ಅಂಶ ಇರುವುದರಿಂದ ಇದನ್ನು ಸೇವಿಸುವುದರಿಂದ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ.
 
* ಬ್ರೌನ್ ಅಕ್ಕಿಯುಲ್ಲಿ ಕರಗುವ ಫೈಬರ್‌ನ ಅಂಶವಿರುವುದರಿಂದ ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ನೆರವಾಗುತ್ತದೆ.
 
* ಬ್ರೌನ್ ಅಕ್ಕಿಯನ್ನು ಸೇವಿಸುವುದರಿಂದ ಬೊಜ್ಜನ್ನು ಇಳಿಸಲು ಸಹಕಾರಿಯಾಗಿದೆ. 
 
* ಬ್ರೌನ್ ಅಕ್ಕಿಯು ದೇಹಕ್ಕೆ ಬೇಕಾಗುವ ಒಳ್ಳೆಯ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತದೆ.
 
* ಬ್ರೌಸ್ ಅಕ್ಕಿಯಲ್ಲಿರುವ ಎಣ್ಣೆ, ಅಂಶವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. 
 
* ಬ್ರೌನ್ ಅಕ್ಕಿಯಲ್ಲಿ ಮ್ಯಾಂಗನೀಸ್ ಅಂಶವು ಇರುವುದರಿಂದ ಇದನ್ನು ಸೇವಿಸುವುದರಿಂದ ನಾಡಿ ವ್ಯವಸ್ಛೆಯು ಚೆನ್ನಾಗಿ ಕೆಲಸ ಮಾಡುತ್ತದೆ.
 
* ಬ್ರೌನ್ ಅಕ್ಕಿಯ ಸೇವನೆಯಿಂದ ಮಿದುಳು ಚುರುಕಾಗುವುದಲ್ಲದೇ ಜ್ಞಾಪಕಶಕ್ತಿಯು ಹೆಚ್ಚುತ್ತದೆ.
 
* ಬ್ರೌನ್ ಅಕ್ಕಿಯನ್ನು ಹಾಲುಣಿಸುವ ತಾಯಂದಿರು ಸೇವಿಸುವುದರಿಂದ ಅವರಲ್ಲಿ ಮನೋಭಾವದ ತೊಂದರೆಗಳು, ಖಿನ್ನತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ.
 
* ಬ್ರೌನ್ ಅಕ್ಕಿಯಲ್ಲಿ ಸೆಲೆನಿಯಂ ಎಂಬ ಪೋಷಕ ಪದಾರ್ಥವು ಹೇರಳವಾಗಿರುವುದರಿಂದ ಹೃದ್ರೋಗಗಳು, ಕ್ಯಾನ್ಸರ್ ಮತ್ತು ಕೀಲು ನೋವು ಬರದಂತೆ ಕಾಪಾಡುತ್ತದೆ.
 
* ಬ್ರೌನ್ ಅಕ್ಕಿಯಲ್ಲಿರುವ ಮ್ಯಾಂಗನೀಸ್ ಅಂಶವು ಸಂತಾನೋತ್ಪತ್ತಿ ಮತ್ತು ನರಮಂಡಲ ವ್ಯವಸ್ಥೆಗೆ ಬಹಳ ಒಳ್ಳೆಯದು.
 
* ಬ್ರೌನ್ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ನಿಧಾನವಾಗಿ ಕರಗುವುದರಿಂದ ಇದು ಶುಗರ್ ಅಂಶವನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ.
 
* ಬ್ರೌನ್ ಅಕ್ಕಿಯಲ್ಲಿ ವಿಟಾಮಿನ್ ಮತ್ತು ಮಿನರಲ್ಸ್ ಅಂಶವು ಅಧಿಕ ಪ್ರಮಾಣದಲ್ಲಿರುವುದರಿಂದ ಆರೋಗ್ಯಕ್ಕೆ ಪೌಷ್ಟಿಕಾಂಶವಾಗಿ ಕೆಲಸ ಮಾಡುತ್ತದೆ.
 
* ಅಕ್ಸಿಡೇಶನ್‌ನಿಂದಾಗುವ ರೋಗಗಳನ್ನು ತಡೆಯುವ ಶಕ್ತಿ ಬ್ರೌನ್ ಅಕ್ಕಿಗಿದೆ.
 
* ಬ್ರೌನ್ ಅಕ್ಕಿಯು ನಿದ್ರಾಹೀನತೆಯನ್ನು ಕಡಿಮೆಗೊಳಿಸುತ್ತದೆ.
 
* ಬ್ರೌನ್ ಅಕ್ಕಿಯಲ್ಲಿರುವ ಮೆಗ್ನಿಸಿಯಂ ಅಂಶವು ಎಲುಬುಗಳ ನಿರ್ವಹಣೆಗೆ ಸಹಕಾರಿಯಾಗಿದೆ.
 
* ಬ್ರೌನ್ ಅಕ್ಕಿಯಲ್ಲಿ ಫೈಬರ್ ಅಂಶಗಳು ಇರುವುದರಿಂದ ಇದು ಗ್ಯಾಸ್, ಅಜೀರ್ಣ, ಅಸಿಡಿಟಿ, ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
 
* ಬ್ರೌನ್ ಅಕ್ಕಿಯಲ್ಲಿ ಸೆಲೆನಿಯಂ ಅಂಶವಿರುವುದರಿಂದ ಕ್ಯಾನ್ಸರ್, ವಾತ ಮತ್ತು ಹೃದಯದ ಸಮಸ್ಯೆಗಳು ಬರದಂತೆ ತಡೆಗಟ್ಟುತ್ತದೆ.
 
* ಬ್ರೌಸ್ ಅಕ್ಕಿಯಲ್ಲಿ ಇರುವ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಸ್ತನ ಕ್ಯಾನ್ಸರ್ ಮತ್ತು ಲುಕೇಮಿಯಾದಂತಹ ಖಾಯಿಲೆ ಬರದಂತೆ ತಡೆಗಟ್ಟುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ