ಐದು ನಿಮಿಷದ ರಸಮಲೈ

ಶನಿವಾರ, 15 ನವೆಂಬರ್ 2014 (15:22 IST)
ಬೇಕಾಗುವ ಸಾಮಗ್ರಿ: ಒಂದು ಕ್ಯಾನ್ ರಸಗುಲ್ಲ (10ರಿಂದ 15 ಪೀಸ್), ನಾಲ್ಕು ಕಪ್ ಹಾಲು, ಕಾಲು ಕಪ್ ಸಕ್ಕರೆ, ಸ್ವಲ್ಪ ಕೇಸರಿ ದಳ, ಸ್ವಲ್ಪ ಏಲಕ್ಕಿ ಪುಡಿ.
 
ಮಾಡುವ ವಿಧಾನ: ಹಾಲನ್ನು ನಾನ್‌ಸ್ಟಿಕ್ ಪಾತ್ರೆಯಲ್ಲಿ ಹಾಕಿ ಕುದಿಸುತ್ತಾ ಇರಿ. ನಂತರ ಸಕ್ಕರೆ ಸೇರಿಸಿ. ಕೇಸರಿ ದಳ, ಏಲಕ್ಕಿ ಪುಡಿ ಸೇರಿಸಿ. ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಕ್ಯಾನ್‌ನಿಂದ ರಸಗುಲ್ಲವನ್ನು ಸ್ವಲ್ಪ ಹಿಂಡಿ ತೆಗೆಯಿರಿ. ನಂತರ ಅದನ್ನು ಈ ಹಾಲಿನಲ್ಲಿ ಹಾಕಿ. ಹಾಲಿನ ಸಿಹಿ ಪರೀಕ್ಷಿಸಿ. ಹೆಚ್ಚು ಸಿಹಿ ಬೇಕಿದ್ದರೆ ಸಕ್ಕರೆ ಸೇರಿಸಿ. ಬಿಸಿಯಾಗಿ ಅಥವಾ ತಣ್ಣಗಾಗಿ ತಿನ್ನಲು ಕೊಡಿ. ಬೇಕಿದ್ದರೆ, ಬಾದಾಮಿ, ದ್ರಾಕ್ಷಿ ಗೋಡಂಬಿ ಹಾಕಿ ಅಲಂಕರಿಸಿ.

ವೆಬ್ದುನಿಯಾವನ್ನು ಓದಿ