ಹೆಸರುಕಾಳಿನಿಂದ ಮಾಡಿ ಆರೋಗ್ಯಕರ ಕೋಸಂಬರಿ

ಶನಿವಾರ, 1 ಏಪ್ರಿಲ್ 2023 (12:15 IST)
ನಾವು ಯಾವುದೇ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಹೋದಾಗ ಊಟದಲ್ಲಿ ಹೆಸರು ಕಾಳು ಇಲ್ಲವೇ ಹೆಸರು ಬೇಳೆಯ ಕೋಸಂಬರಿಯನ್ನು ಮಿಸ್ ಮಾಡದೇ ನೋಡುತ್ತೇವೆ.
 
ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಈ ಸಲಾಡ್ ತುಂಬಾ ಫೇಮಸ್. ನಾವಿಂದು ಮೊಳಕೆ ಬರಿಸಿದ ಹೆಸರು ಕಾಳಿನಿಂದ ಅತ್ಯಂತ ಆರೋಗ್ಯಕರ, ಪೌಷ್ಟಿಕ ಮಾತ್ರವಲ್ಲದೇ ರುಚಿಕರ ಕೋಸಂಬರಿಯನ್ನು ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ. ಈ ಸಿಂಪಲ್ ರೆಸಿಪಿಯನ್ನು ಕೇವಲ ಮದುವೆಯಂತಹ ಕಾರ್ಯಕ್ರಮಗಳಲ್ಲಿ ಯಾಕೆ? ಮನೆಯಲ್ಲೂ ಬೇಕೆಂದಾಗ ಮಾಡಿ ಸವಿಯಿರಿ.

ಬೇಕಾಗುವ ಪಾರ್ಥಗಳು

ಮೊಳಕೆಯೊಡೆದ ಹೆಸರುಕಾಳು – 1 ಕಪ್
ತುರಿದ ಕ್ಯಾರೆಟ್ – ಅರ್ಧ ಕಪ್
ದಾಳಿಂಬೆ – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ತೆಂಗಿನ ತುರಿ – 2 ಟೀಸ್ಪೂನ್

ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
ನಿಂಬೆ ರಸ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ಕರಿಬೇವಿನ ಎಲೆ – ಕೆಲವು 

ಮಾಡುವ ವಿಧಾನ

* ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಳಕೆಯೊಡೆದ ಹೆಸರು ಕಾಳು, ತುರಿದ ಕ್ಯಾರೆಟ್, ದಾಳಿಂಬೆ, ಹಸಿರು ಮೆಣಸಿನಕಾಯಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ.
* ಒಂದು ಚಿಕ್ಕ ಬಾಣಲೆ ತೆಗೆದುಕೊಂಡು, ಅದರಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಬಳಿಕ ಅದಕ್ಕೆ ಸಾಸಿವೆ ಹಾಕಿ ಸಿಡಿಸಿ.
* ಬಳಿಕ ಚಿಟಿಕೆ ಹಿಂಗ್ ಹಾಗೂ ಕರಿಬೇವಿನ ಎಲೆ ಹಾಕಿ, ಸ್ವಲ್ಪ ಹುರಿದು, ಬಳಿಕ ಹೆಸರು ಕಾಳಿನ ಮಿಶ್ರಣಕ್ಕೆ ಸುರಿಯಿರಿ.
* ಇದೀಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ, ಆರೋಗ್ಯಕರ ಮೊಳಕೆಯೊಡೆದ ಹೆಸರುಕಾಳಿನ ಕೋಸಂಬರಿ ಸವಿಯಲು ಸಿದ್ಧವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ