ತಯಾರಿಸುವ ವಿಧಾನ:
ಮೊದಲಿಗೆ ಇಡ್ಲಿ ಪಾತ್ರೆಯನ್ನು ಕಾಯಲು ಇಡಬೇಕು. ನಂತರ ಬ್ರೆಡ್ ಪೌಡರ್ ಅಂದರೆ ಬ್ರೆಡ್ ಅನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡಿರಬೇಕು. ನಂತರ ಒಂದು ಬಟ್ಟಲಿಗೆ ಬ್ರೆಡ್ ಪೌಡರ್, ಮೈದಾ, ಸಕ್ಕರೆ, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಒಂದು ಬಟ್ಟಲಿಗೆ ತುಪ್ಪವನ್ನು ಸವರಿ ಮೈದಾವನ್ನು ಹಾಕಿ ಸುತ್ತಲೂ ತಿರುಗಿಸಿ ಹಚ್ಚಿನ ಮೈದಾವನ್ನು ತೆಗೆದುಬಿಡಬೇಕು. ನಂತರ ಇದಕ್ಕೆ ರೆಡಿ ಆಗಿರುವ ಕೇಕ್ ಮಿಶ್ರಣವನ್ನು ಹಾಕಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಅದರ ಮೇಲೆ ಹೆಚ್ಚಿದ ಬಾದಾಮಿಯನ್ನು ಉದುರಿಸಬೇಕು. ಅದನ್ನು 45 ರಿಂದ 1 ಗಂಟೆಯವರೆಗೆ ಹಬೆಯಲ್ಲಿ ಬೇಯಿಸಬೇಕು. ಮಧ್ಯ ಮಧ್ಯ ಚಾಕು ಅಥವಾ ಕಡ್ಡಿಯನ್ನು ಹಾಕಿ ನೋಡಬಹುದು. ಯಾವುದೇ ಹಿಟ್ಟು ಅಂಟದೇ ಇದ್ದರೆ ಕೇಕ್ ಬೆಂದಿದೆ ಎಂದು ಅರ್ಥ. ಈಗ ರುಚಿಕರವಾದ ಬ್ರೆಡ್ ಬಾದಾಮ್ ಕೇಕ್ ಸವಿಯಲು ಸಿದ್ಧ.