ರುಚಿಕರವಾಗಿ ಬಾರ್ಲಿ ಚಪಾತಿಯನ್ನು ಮಾಡುವ ಬಗೆ

ಗುರುವಾರ, 21 ಫೆಬ್ರವರಿ 2019 (14:05 IST)
ಆರೋಗ್ಯಕರವಾದ ಧಾನ್ಯಗಳಲ್ಲಿ ಬಾರ್ಲಿಯೂ ಒಂದು. ಇದರ ಬಳಕೆ ಹಲವರಿಗೆ ತಿಳಿದಿಲ್ಲ ಎಂದರೂ ತಪ್ಪಾಗಲಾರದು. ಆದರೆ ಇದು ಆರೋಗ್ಯಕ್ಕೆ ಅವಶ್ಯಕವಾದ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದರಿಂದ ರುಚಿಕರವಾಗಿ ಚಪಾತಿಯನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ.. 
 ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಬಾರ್ಲಿ ಹಿಟ್ಟು 1 ಕಪ್
* ನೀರು 1 ಕಪ್
* ಚಿಟಿಕೆಯಷ್ಟು ಉಪ್ಪು
* ತುಪ್ಪ 1 ಟೀ ಚಮಚ
 
ತಯಾರಿಸುವ ವಿಧಾನ:
ಮೊದಲು ಸ್ವಲ್ಪ ನೀರನ್ನು ಬಿಸಿ ಮಾಡಿಕೊಂಡು ಉಪ್ಪು ಮತ್ತು ತುಪ್ಪವನ್ನು ಹಾಕಬೇಕು. ನಂತರ ಅದಕ್ಕೆ ಜರಡಿ ಹಿಡಿದ ಬಾರ್ಲಿಯನ್ನು ಸೇರಿಸಬೇಕು. ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ  ಉರಿಯಲ್ಲಿ ನಿಧಾನವಾಗಿ ಐದು ನಿಮಿಷ ಮಗುಚಬೇಕು. ಹೀಗೆ ಮಾಡಿದರೆ ಹಿಟ್ಟು ಕೈಗೆ ಅಂಟುವುದಿಲ್ಲ. ನಂತರ ಒಲೆಯಿಂದ ಇಳಿಸಿ ಅದನ್ನು ಪೂರ್ತಿಯಾಗಿ ಆರಲು ಬಿಡಬೇಕು. ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಬಾರ್ಲಿ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಉದುರಿಸಿಕೊಂಡು ಲಟ್ಟಣಿಗೆಯಿಂದ ತೆಳುವಾಗಿ ಲಟ್ಟಿಸಿಕೊಳ್ಳಬೇಕು. ನಂತರ ತವವನ್ನು ಬಿಸಿ ಮಾಡಿಕೊಂಡು ಎರಡೂ ಬದಿಯಲ್ಲಿ ಬೇಯಿಸಬೇಕು. ಇದಕ್ಕೆ ಎಣ್ಣೆಯನ್ನು ಹಾಕುವ ಅಗತ್ಯವಿರುವುದಿಲ್ಲ ಹಾಗೆಯೇ ಉಬ್ಬುತ್ತದೆ. ಹಾಗೆಯೇ ಬೇಯಿಸಿದರೆ ರುಚಿಕರವಾದ ಬಾರ್ಲಿ ಚಪಾತಿಯು ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ