ಪೈನಾಪಲ್ ಪೇಸ್ಟ್ರಿ

ಗುರುವಾರ, 21 ಫೆಬ್ರವರಿ 2019 (14:14 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಮೈದಾ ಒಂದೂ ಕಾಲು ಕಪ್
* ಸಕ್ಕರೆ 1 ಕಪ್
* ಬೇಕಿಂಗ್ ಪೌಡರ್ ಅರ್ಧ ಚಮಚ
* ಸೋಡಾ ಪುಡಿ ಅರ್ಧ ಚಮಚ
    ಮೊದಲು ಇವೆಲ್ಲವನ್ನೂ ಜರಡಿ ಹಿಡಿದುಕೊಳ್ಳಿ)
* ಮೊಸರು 60 ml
* ರಿಫೈಂಡ್ ಎಣ್ಣೆ 60 ml
* ನೀರು 80 ml
* ಹಾಲು 2 ಚಮಚ
* ಪೈನಾಪಲ್ ಎಸೆನ್ಸ್ ಅಥವಾ ವೆನಿಲ್ಲಾ ಎಸೆನ್ಸ್ 1 ಚಮಚ
 
  ತಯಾರಿಸುವ ವಿಧಾನ:
   ಮೇಲೆ ಹೇಳಿದ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಬ್ಲೆಂಡರ್‌ನಿಂದ ಸೇರಿಸಬೇಕು. ನಂತರ ಬೇಕಿಂಗ್ ಪೌಡರ್ ಮತ್ತು ಸೋಡಾ ಪುಡಿಯನ್ನು ಸೇರಿಸಿ ಕೇಕ್ ಮೌಲ್ಡ್‌ಗೆ ಹಾಕಬೇಕು. ನಂತರ 180 ಡಿಗ್ರಿ ಪ್ರೀ ಹಿಟ್ ಓವನ್‌ನಲ್ಲಿ 25 ನಿಮಿಷ ಬೇಯಿಸಬೇಕು. ನಂತರ 1 ಟೂಥ್‌ಪಿಕ್‌ನಿಂದ ಕೇಕ್ ಅನ್ನು ಚುಚ್ಚಿ ನೋಡಿದರೆ ಅದಕ್ಕೆ ಹಿಟ್ಟು ಮೆತ್ತಿಕೊಳ್ಳದಿದ್ದರೆ ಅದು ಬೆಂದಿದೆ ಎಂದರ್ಥ. ಅದಕ್ಕೇನಾದರೂ ಹಿಟ್ಟು ಮೆತ್ತಿಕೊಂಡರೆ ಮತ್ತೆ 2 ರಿಂದ 3 ನಿಮಿಷ ಬೇಯಿಸಬೇಕು. ನಂತರ 1 ಪೈನಾಪಲ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಅದನ್ನು ಜ್ಯೂಸ್ ಮಾಡಿಟ್ಟುಕೊಳ್ಳಬೇಕು. ನಂತರ ಓವನ್ ಇಂದ ಕೇಕ್ ಅನ್ನು ಹೊರತೆಗೆದು ಕೇಕ್2ನ ಮಧ್ಯಭಾಗದಲ್ಲಿ ಕತ್ತರಿಸಿ ಈಗಾಗಲೇ ಮಾಡಿಕೊಂಡ ಪೈನಾಪಲ್ ಜ್ಯೂಸ್ ಅನ್ನು ಬ್ರಷ್‌ನಿಂದ ಸವರಿ ಕ್ರೀಂ ಅನ್ನು ಹಚ್ಚಬೇಕು. ಪೈನಾಪಲ್ ತುಂಡನ್ನೂ ಹಾಕಿ ಅದರ ಮೇಲೆ ಕತ್ತರಿಸಿದ ಇನ್ನೊಂದು ಕೇಕ್ ಅನ್ನು ಇಟ್ಟು ಅದಕ್ಕೂ ಜ್ಯೂಸ್ ಮತ್ತು ಕ್ರೀಂ ಅನ್ನು ಹಚ್ಚಿ ಪೈನಾಪಲ್ ಮತ್ತು ಚೆರ್ರಿಯಿಂದ ಅಲಂಕರಿಸಿದರೆ ರುಚಿಕರವಾದ ಪೈನಾಪಲ್ ಪೇಸ್ಟ್ರಿ ಸವಿಯಲು ಸಿದ್ಧ. 
 
   ಕ್ರೀಂ ಅನ್ನು ಹೇಗೆ ತಯಾರಿಸುವುದು:
 
   ಅಮೂಲ್ ಕ್ರೀಂ ಅನ್ನು 1 ಬಟ್ಟಲಿಗೆ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಸೇರಿಸಬೇಕು. ಇನ್ನೊಂದು ಪಾತ್ರೆಯಲ್ಲಿ ಐಸ್ ಕ್ಯೂಬ್ ಅನ್ನು ಹಾಕಿ ಅದನ್ನು ಇದರ ಮೇಲೆ ಇಟ್ಟು ಚೆನ್ನಾಗಿ ಬ್ಲೆಂಡ್ ಮಾಡಬೇಕು. ಅದು ಬೆಣ್ಣೆಯಾಗದಂತೆ ಎಚ್ಚರ ವಹಿಸಬೇಕು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ