ಬೆಳಿಗ್ಗೆ ಟಿಫನ್ ಗೆ ತಯಾರಿಸಿ ಬ್ರೆಡ್ ಇಡ್ಲಿ

ಶನಿವಾರ, 18 ಜುಲೈ 2020 (12:31 IST)
Normal 0 false false false EN-US X-NONE X-NONE

ಬೆಂಗಳೂರು : ಬೆಳಿಗ್ಗೆ ತಿಂಡಿ ಮಾಡಲು ಮಹಿಳೆಯರು ತುಂಬಾ ತಲೆಕೆಡಿಸಿಕೊಳ್ಳುತ್ತಾರೆ. ಅಂತವರು ಬೆಳಿಗ್ಗೆ ಬೇಗನೇ, ಸುಲಭವಾಗಿ ತಯಾರಾಗುವಂತಹ ಬ್ರೆಡ್ ಇಡ್ಲಿಯನ್ನು ಮಾಡಿ.
 

ಬೇಕಾಗುವ ಸಾಮಾಗ್ರಿಗಳು : 4 ಬ್ರೆಡ್ ಪೀಸ್,  1 ಕಪ್ ಇಡ್ಲಿ ರವಾ, ಉಪ್ಪು, 1 ಕಪ್ ಮೊಸರು, 1 ½ ಕಪ್ ನೀರು, ಅಡುಗೆ ಸೋಡಾ.

ಮಾಡುವ ವಿಧಾನ : ಮೊದಲಿಗೆ ಬ್ರೆಡ್ ಬದಿಯಲ್ಲಿರುವ ಕಂದು  ಬಣ್ಣದ ಪೀಸ್ ಗಳನ್ನು ತೆಗೆಯಿರಿ, ಬಳಿಕ ಬ್ರೆಡ್ ನ್ನು ಮಿಕ್ಸಿಯಲ್ಲಿ ರುಬ್ಬಿ. ಈ ರುಬ್ಬಿದ ಮಿಶ್ರಣಕ್ಕೆ ಇಡ್ಲಿ ರವಾ, ಉಪ್ಪು, ಮೊಸರು, ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಮಿಕ್ಸ್ ಮಾಡಿ. ನೀರು ಬೇಕಾದಲ್ಲಿ ಮಾತ್ರ ಬಳಸಿ. ಹಿಟ್ಟನ್ನು 30 ನಿಮಿಷ ಹಾಗೇ ಇಟ್ಟು ಬಳಿಕ 1 ಚಿಟಿಕೆ  ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇಡ್ಲಿ ಬೇಯಿಸಿದ ರೀತಿಯಲ್ಲೇ ಹಬೆಯಲ್ಲಿ 15 ನಿಮಿಷ ಬೇಯಿಸಿದರೆ ಬ್ರೆಡ್ ಇಡ್ಲಿ ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ