ದೊಣ್ಣೆ ಮೆಣಸಿನಕಾಯಿ ಜುಣ್ಕಾ

ಶನಿವಾರ, 3 ಫೆಬ್ರವರಿ 2018 (15:43 IST)
ಬೆಂಗಳೂರು: ಸಾಮಾಗ್ರಿಗಳು: 2 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ, 2 ಹದ ಗಾತ್ರದ ಈರುಳ್ಳಿ ಸಣ್ಣಗೆ ಹಚ್ಚಿ, 1 ಹದ ಗಾತ್ರದ ಟೊಮೆಟೋ-ಸಣ್ಣಗೆ ಹಚ್ಚಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ, 1 ಚಮಚ ಮೆಣಸಿನಕಾಯಿ ಪುಡಿ, 1/4 ಚಮಚ ಅರಿಶಿನ ಪುಡಿ, 1 ದೊಡ್ಡ ಚಮಚ ಕಡ್ಲೆಹಿಟ್ಟು, 3 ದೊಡ್ಡ ಚಮಚ ಎಣ್ಣೆ.


ವಿಧಾನಗಳು: ಬಾಣಲೆಗೆ ಎಣ್ಣೆ ಸುರಿದು, ಒಲೆಯ ಮೇಲಿಟ್ಟು, ಎಣ್ಣೆ ಕಾದ  ತಕ್ಷಣ ಈರುಳ್ಳಿ ಹಾಕಿ ಗುಲಾಬಿ ಬಣ್ಣದ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಸ್ವಲ್ಪ ಕೆದಕಿ, ದೊಣ್ಣೆ ಮೆಣಸನ್ನೂ ಸೇರಿಸಿ ಕೆದಕಿ, ಉಪ್ಪು, ಮೆಣಸಿನಕಾಯಿ ಮತ್ತು ಅರಿಸಿನ ಪುಡಿಗಳನ್ನು ಹಾಕಿ ಚೆನ್ನಾಗಿ ಮಗುಚಿರಿ. ದೊಣ್ಣೆ ಮೆಣಸಿನ ತುಂಡುಗಳಲ್ಲಿ ನೀರಿನ ಪೆಸೆ ಆರಿದ ಕೂಡಲೇ ಸ್ವಲ್ಪ ಕಡ್ಲೆ ಹಿಟ್ಟನ್ನು ಸಿಂಪಡಿಸಿ ಮುಗುಚಿರಿ. ತಳ ಹತ್ತದ ಹಾಗೆ ಕೈ ಬಿಡದೆ ಕೆದಕಿ. ಎರಡು ಅಥವಾ ಮೂರು ಸ್ವಲ್ಪ ಕಡ್ಲೆಹಿಟ್ಟನ್ನು ಸಿಂಪಡಿಸಿ, ಹಸಿ ವಾಸನೆ ಹೋದ ಮೇಲೆ, 1 ಕಪ್  ನೀರು ಸೇರಿಸಿ, ಚೆನ್ನಾಗಿ ಮಗುಚಿ, ಕುದಿಸಿರಿ. ಮಸಾಲೆ ಸ್ವಲ್ಪ ದಪ್ಪಗಾದ ಮೇಲೆ ಬಾಣಲೆ ಕೆಳಗಿಳಿಸಿ. ಕೊತ್ತಂಬರಿ ಸೊಪ್ಪು ಹಾಕಿ. ಚಪಾತಿ, ಪೂರಿ ಜತೆ ಸವಿಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ