ಕೊಬ್ಬರಿ ಕಿಸಸ್

ಶನಿವಾರ, 15 ನವೆಂಬರ್ 2014 (15:28 IST)
ಬೇಕಾಗುವ ಸಾಮಗ್ರಿ: ಒಂದು ಕಾಲು ಕಪ್ ತುರಿದ ಕೊಬ್ಬರಿ, ಒಂದು ಕಪ್ ಸಕ್ಕರೆ, 2 ಕಪ್ ಕಾರ್ನ್ ಫ್ಲೇಕ್ಸ್, ಅರ್ಧ ಕಪ್ ಒಣದ್ರಾಕ್ಷಿ/ಗೋಡಂಬಿ/ಬಾದಾಮಿ, 2 ಮೊಟ್ಟೆ, ವೆನಿಲ್ಲಾ ಎಸೆನ್ಸೆ ಎರಡು ಚಮಚ, ಒಂದು ಚಿಟಿಕೆ ಉಪ್ಪು.
 
ಮಾಡುವ ವಿಧಾನ: ಮೊಟ್ಟೆ ಒಡೆದು ಬೀಟ್ ಮಾಡಿ ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ನೊರೆನೊರೆಯಾಗುವಂತೆ ಬೀಟ್ ಮಾಡಿ. ಅದಕ್ಕೆ ಸ್ವಲ್ಪ ಸ್ವಲ್ಪವೇ ಸಕ್ಕರೆ ಸೇರಿಸುತ್ತಾ ಸ್ವಲ್ಪ ಗಟ್ಟಿಯಾಗುವವರೆಗೂ ಬಿಡಿ. ವೆನಿಲ್ಲಾ ಎಸೆನ್ಸ್ ಸೇರಿಸಿ. ಕಾರ್ನ್ ಫ್ಲೇಕ್ಸ್, ಕೊಬ್ಬರಿ ತುರಿ ಹಾಗೂ ಕತ್ತರಿಸಿದ ಗೋಡಂಬಿ, ಬಾದಾಮಿ ಸೇರಿಸಿ. ಉರುಟಾದ ಸ್ಪೂನ್ ಮೂಲಕ ಉರುಟಾಗಿ ಇವುಗಳನ್ನು ಉಂಡೆಕಟ್ಟಿ ತುಪ್ಪ ಹಚ್ಚಿದ ಸಿಲ್ವರ್ ಫಾಯಿಲ್ ಮೇಲಿಟ್ಟು 350 ಡಿಗ್ರಿ ಯಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿ. ಕೂಡಲೇ ಹೊರತೆಗೆಯಿರಿ.

ವೆಬ್ದುನಿಯಾವನ್ನು ಓದಿ