ಆರೋಗ್ಯಕ್ಕೆ ತುಂಬಾ ಒಳ್ಳೆಯದು ಸೌತೆಕಾಯಿ

ಅತಿಥಾ

ಶುಕ್ರವಾರ, 29 ಡಿಸೆಂಬರ್ 2017 (12:32 IST)
ತರಕಾರಿಗಳಲ್ಲಿ ಶೇಕಡಾ 90% ರಷ್ಟು ನೀರಿನಾಂಶ ಹೊಂದಿರುವ ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದನ್ನು ಸಲಾಡ್ ಹಾಗೂ ಹಸಿಯಾಗಿ ಸಹ ಸೇವಿಸುವುದಷ್ಟೇ ಅಲ್ಲ ಬಗೆಬಗೆಯ ಖಾದ್ಯವನ್ನಾಗಿ ತಯಾರಿಸಿಯು ತಿನ್ನುತ್ತಾರೆ. ಸವತೆಕಾಯಿ ಇಂದ ಯಾವೆಲ್ಲಾ ಖಾದ್ಯವನ್ನು ತಯಾರಿಸಬಹುದು ಅಂತೀರಾ ಇಲ್ಲಿದೆ ಮಾಹಿತಿ.
 
ಸೌತೆಕಾಯಿ ಪಾಯಸ
ಬೇಕಾಗುವ ಸಾಮಗ್ರಿಗಳು
 
ಸೌತೆಕಾಯಿ - 1/3 ಕಪ್ (ತುರಿದಿರುವುದು)
ಹಾಲು - 2 ಕಪ್‌
ಕಂಡೆನ್ಸ್‌ಡ್ ಹಾಲು - ¼ ಕಪ್
ಸಕ್ಕರೆ - 2 ಚಮಚ
ಏಲಕ್ಕಿ ಪುಡಿ - ¼ ಚಮಚ
ಗೋಡಂಬಿ, ಬಾದಾಮಿ - 1 ಚಮಚ
ತುಪ್ಪ - 2 ಚಮಚ
 
ಮಾಡುವ ವಿಧಾನ
 
ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಗೋಡಂಬಿ, ಬಾದಾಮಿ ಸೇರಿಸಿ ಸ್ವಲ್ಪ ಹುರಿಯಿರಿ. ಈಗ ಇದಕ್ಕೆ ತುರಿದ ಸೌತೆಕಾಯಿ ಹಾಕಿ ಮಧ್ಯಮ ಉರಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ ನಂತರ ಅದಕ್ಕೆ ಹಾಲು ಸೇರಿಸಿ ಮಿಶ್ರಣ ಮಾಡಿ ಕುದಿಯಲು ಬಿಡಿ. ತದನಂತರ ಬಾಣಲೆಯಲ್ಲಿ ಹಾಲಿನ ಮಿಶ್ರಣವು ಕುದಿಯುತ್ತಿದ್ದಂತೆ ಸಕ್ಕರೆ, ಕಂಡೆನ್ಸ್‌ಡ್ ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಹಾಗೂ ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿದರೆ ರುಚಿಕರ ಹಾಗು ಆರೋಗ್ಯಕರ ಸೌತೆಕಾಯಿ ಪಾಯಸ ಸೇವಿಯಲು ಸಿದ್ಧ.
 
 
ಸೌತೆಕಾಯಿ ಪಕೋಡ



ಬೇಕಾಗುವ ಸಾಮಗ್ರಿಗಳು
 
ಸಿಪ್ಪೆ ತೆಗೆದಿರುವ ಸೌತೆಕಾಯಿ ತುಂಡುಗಳು – 1 ಕಪ್‌
5-6 ಚಮಚ ಕಡಲೆ ಹಿಟ್ಟು
1 ಚಮಚ ಖಾರ ಪುಡಿ
ಉಪ್ಪು
ಜೀರಿಗೆ – 1/2 ಚಮಚ
ಎಣ್ಣೆ
ಚಿಟಿಕೆ ಅಡುಗೆ ಸೋಡ
 
 
ಮಾಡುವ ವಿಧಾನ: 
- ಒಂದು ಬಟ್ಟಲಲ್ಲಿ ಕಡಲೆ ಹಿಟ್ಟು, ಖಾರ ಪುಡಿ,ಜೀರಿಗೆ ,ಉಪ್ಪು,ಅಡುಗೆ ಸೋಡ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ- ಹಿಟ್ಟು ಸ್ವಲ್ಪ ಗಟ್ಟಿಯಾಗಿರಲಿ

ನಂತರ ಒಂದು ಬಾಣಲಿಯಲ್ಲಿ ಸಾಕಷ್ಟು ಎಣ್ಣೆಯನ್ನು ಹಾಕಿ ಕಾಯಿಸಿ
 
ಮಿಶ್ರಣ ಮಾಡಿದ ಹಿಟ್ಟಿಗೆ ಸೌತೆಕಾಯಿ ತುಂಡುಗಳನ್ನು ಅದ್ದಿಸಿ, ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವ ತನಕ ಹುರಿದರೆ ರುಚಿಕರ ಸೌತೆಕಾಯಿ ಪಕೋಡ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ