ಸ್ವಾದಿಷ್ಠ ಸೌತೆಬೀಜದ ತಂಬುಳಿ

ಸೋಮವಾರ, 25 ಮಾರ್ಚ್ 2019 (14:48 IST)
ಸಾಮಾನ್ಯವಾಗಿ ನಾವು ಬೀಜಗಳನ್ನು ಬಿಸಾಕುತ್ತೇವೆ. ಆದರೆ ಸೌತೆಕಾಯಿಯ ಬೀಜಗಳಿಂದ ನಾವು ರುಚಿಕರವಾದ ತಂಬುಳಿಯನ್ನು ಮಾಡಿಕೊಂಡು ಸವಿಯಬಹುದು. ಅದರಲ್ಲಿಯೂ ಬಿಸಿಲಿನ ಝಳ ಹೆಚ್ಚಾಗಿದೆಂತಲ್ಲಾ ಇಂತಹ ತಂಬುಳಿಯನ್ನು ಮಾಡುವುದರಿಂದ ದೇಹಕ್ಕೂ ಒಳ್ಳೆಯದು. ಹಾಗಾದರೆ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ..
  
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಸೌತೆಕಾಯಿ ಬೀಜ 1/4 ಕಪ್
* ತೆಂಗಿನಕಾಯಿ ತುರಿ 2 ಟೀ ಚಮಚ
* ಕಾಳುಮೆಣಸು 8
* ಜೀರಿಗೆ 1 ಟೀ ಚಮಚ
* ಮಜ್ಜಿಗೆ 1/2 ಲೀಟರ್
* ರುಚಿಗೆ ತಕ್ಕಷ್ಟು ಉಪ್ಪು
* ಸಾಸಿವೆ 1 ಟೀ ಚಮಚ
* ಒಣಮೆಣಸಿನಕಾಯಿ 1
* ಎಣ್ಣೆ ಅಥವಾ ತುಪ್ಪ 1 ಟೀ ಚಮಚ
 
   ತಯಾರಿಸುವ ವಿಧಾನ:
   ಮೊದಲು ಸೌತೆಕಾಯಿ ಬೀಜಕ್ಕೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಅದನ್ನು ಸೋಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಜೀರಿಗೆ, ಕಾಳುಮೆಣಸು, ಸ್ವಲ್ಪ ತುಪ್ಪವನ್ನು ಹಾಕಿ ಹುರಿಯಬೇಕು. ನಂತರ ಹುರಿದ ಪದಾರ್ಥ, ತೆಂಗಿನಕಾಯಿ ತುರಿ, ಉಪ್ಪು ಮತ್ತು ತಯಾರಿಸಿಕೊಂಡ ಸೌತೆಕಾಯಿ ಬೀಜದ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಬೇಕುಯ ನಂತರ ಈ ಮಿಶ್ರಣಕ್ಕೆ ಮೊಸರು ಅಥವಾ ಮಜ್ಜಿಗೆಯನ್ನು ಹಾಕಿ ಸರಿಯಾಗಿ ಮಿಶ್ರಮ ಮಾಡಿಕೊಳ್ಳಬೇಕು. ನಂತರ ನಿಮಗೆ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಬೇಕು. ನಂತರ ಅದಕ್ಕೆ ಸಾಸಿವೆ, ಒಣಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆಯನ್ನು ಹಾಕಿದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ