ನಮಗೆ ಬೆಣ್ಣೆ ದೋಸೆ ಎಂದ ತಕ್ಷಣ ನೆನಪಾಗುವುದು ದಾವಣಗೆರೆ ಬೆಣ್ಣೆ ದೋಸೆ ಅದರ ರುಚಿಯೇ ಅಂತಹದು ಒಂದು ಬಾರಿ ತಿಂದ ದೋಸೆಯ ರುಚಿಯನ್ನು ಮರೆಯಲು ಸಾಧ್ಯವೇ ಇಲ್ಲ ಅಷ್ಟೇ ಅಲ್ಲ ದಾವಣಗೆರೆಗೆ ಭೇಟಿನೀಡುವ ಪ್ರತಿಯೊಬ್ಬರು ಇದರ ರುಚಿಯನ್ನು ಸವಿಯದೇ ಇರುವುದಿಲ್ಲ ಅಂತಹ ಬೆಣ್ಣೆ ದೋಸೆಯನ್ನು ನೀವು ಮನೆಯಲ್ಲಿಯೂ ಮಾಡಬಹುದು ಹೇಗಪ್ಪಾ ಅಂತೀರಾ ಸರಳ ವಿಧಾನ ಇಲ್ಲಿದೆ.
ಈ ರುಚಿಯಾದ ದಾವಣಗೆರೆ ಬೆಣ್ಣೆ ಮಸಾಲ ದೋಸೆ ಮಾಡುವ ವಿಧಾನ -
ದೋಸೆಗೆ ಬೇಕಾಗುವ ಸಾಮಾಗ್ರಿಗಳು:
ಅಕ್ಕಿ 4 ಕಪ್ (ನೀರಿನಲ್ಲಿ 5 ಗಂಟೆ ನೆನೆ ಹಾಕಿರಬೇಕು)
ಹುರಿದ ಬೇಳೆ 1 ಕಪ್
ಕಡಲೆ ಪುರಿ 1/2 ಕಪ್
ಮೆಂತೆ 1 ಚಮಚ
ಸಕ್ಕರೆ 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಒಂದು ಚಿಟಿಕೆ ಅಡುಗೆ ಸೋಡಾ
ಮಸಾಲ:
ಬೇಯಿಸಿದ ಮತ್ತು ಸ್ಮಾಶ್ ಮಾಡಿದ ಆಲೂಗೆಡ್ಡೆ 2
ಈರುಳ್ಳಿ 1, ತುಪ್ಪದಲ್ಲಿ ಕರಿದಿದ್ದು
ಉಪ್ಪು ರುಚಿಗೆ ತಕ್ಕಷ್ಟು
ಚಟ್ನಿ:
ತೆಂಗಿನ ತುರಿ 1 ಕಪ್
4 ಹಸಿ ಮೆಣಸು
1 ಚಮಚ ಸಕ್ಕರೆ
ಶುಂಠಿ, ಚಿಕ್ಕ ತುಂಡು
ಕೊತ್ತಂಬರಿ ಸೊಪ್ಪು
ಹುರಿಗಡಲೆ 3 ಚಮಚ
ಚಿಟಿಕೆ ಇಂಗು
ಎಣ್ಣೆ ಒಂದು ಚಮಚ
1/2 ಚಮಚ ಸಾಸಿವೆ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಒಂದು ವೇಳೆ ನೀವು ನಾಳೆ ಬೆಳಗ್ಗೆ ದೋಸೆ ಮಾಡಬೇಕೆಂದು ಇದ್ದರೆ ಮೇಲೆ ಹೇಳಿದಂತೆ ದೋಸೆಯ ಹಿಟ್ಟಿಗೆ ಬೇಕಾದ ಸಾಮಗ್ರಿಗಳನ್ನು ರಾತ್ರಿಯೆ ಮಿಕ್ಸಿಯಲ್ಲಿ ಅರೆದಿಡಬೇಕು. ಬೆಳಿಗ್ಗೆ ತೆವೆಗೆ ಬೆಣ್ಣೆಯನ್ನು ಸವರಿ ತೆಳ್ಳಗೆ ದೋಸೆ ಹಿಟ್ಟನ್ನು ಹಾಕಬೇರು ಅದು ಗರಿಯಾಗುವಾಗ ಅದರ ಎರಡು ಬದಿಗೆ ಇನ್ನೊಮ್ಮೆ ಬೆಣ್ಣೆ ಹಾಕಿ ಒಮ್ಮೆ ಎರಡೂ ಕಡೆ ಮಗುಚಿ ಹಾಕಿದರೆ ರುಚಿಕರವಾದ ಬೆಣ್ಣೆ ದೋಸೆ ರೆಡಿ.
ಅದಕ್ಕೆ ಬೇಕಾದ ಮಸಾಲವನ್ನು ತಯಾರಿಸಲು ಮೇಲೆ ತಿಳಿಸಿದಂತೆ ಬೇಯಿಸಿದ ಆಲೂಗಡ್ಡೆ ತುಪ್ಪದಲ್ಲಿ ಹುರಿದ ಈರುಳ್ಳಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿದರೆ ಮಸಾಲೆಯು ಸಿದ್ಧವಾಗುತ್ತದೆಬೇಕಾದಲ್ಲಿ ನೀವು ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಹಸಿಮೆಣಸನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಹಾಕಬಹುದು.
ಚಟ್ನಿಯನ್ನು ತಯಾರಿಸಲು ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಅರೆಯಬೇಕು, ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ ಈ ಚಟ್ನಿಗೆ ಒಗ್ಗರಣೆ ಹಾಕಿದರೆ ರುಚಿರುಚಿಯಾದ ಚಟ್ನಿ ಸಿದ್ಧವಾಗುತ್ತದೆ. ಚಟ್ನಿ ಖಾರಬೇಕಿದ್ದಲ್ಲಿ ಹಸಿಮೆಣಸನ್ನು ಸ್ವಲ್ಪ ಜಾಸ್ತಿ ಮಾಡಿಕೊಳ್ಳಬಹುದು.
ಇವೆಲ್ಲವನ್ನು ತಟ್ಟೆಯಲ್ಲಿರಿಸಿ ಅದಕ್ಕೆ ಸ್ವಲ್ಪ ಬೆಣ್ಣೆಯನ್ನು ಪಕ್ಕದಲ್ಲಿಟ್ಟು ಸರ್ವ ಮಾಡಿದರೆ ಮುಗಿಯಿತು ರುಚಿಕರವಾದ ಬೆಣ್ಣೆ ಮಸಾಲ ದೋಸೆ ಸಿದ್ಧ.