ಸ್ವಾದಿಷ್ಠ ಓಟ್ಸ್ ಇಡ್ಲಿ

ಶುಕ್ರವಾರ, 22 ಮಾರ್ಚ್ 2019 (19:36 IST)
ಒಟ್ಸ್ ಪೌಷ್ಟಿಕಾಂಶವುಳ್ಳ ಪದಾರ್ಥ. ಇದನ್ನು ತಿನ್ನುವುದರಿಂದ ಶಕ್ತಿ ಹೆಚ್ಚಾಗುವುದರೊಂದಿಗೆ ಮಧುಮೇಹವು ಸಮತೋಲನಕ್ಕೆ ಬರುತ್ತದೆ ಮತ್ತು ತೂಕವನ್ನು ಇಳಿಸುವಲ್ಲಿ ಸಹಕಾರಿಯಾಗಿದೆ.
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಓಟ್ಸ್ 1 ಕಪ್
* ಚಿರೋಟಿ ರವೆ 1/2 ಕಪ್
* ಮೊಸರು 1 ಕಪ್
* ಕ್ಯಾರೆಟ್ ತುರಿ 1/2 ಕಪ್
* ಸಾಸಿವೆ 1/2 ಟೀ ಚಮಚ
* ಉದ್ದಿನಬೇಳೆ 1/2 ಟೀ ಚಮಚ
* ಕಡಲೆಬೇಳೆ 1/2 ಟೀ ಚಮಚ
* ಜೀರಿಗೆ 1/2 ಟೀ ಚಮಚ
* ಎಣ್ಣೆ ಅಥವಾ ತುಪ್ಪ 2 ಟೀ ಚಮಚ
* ಕೊತ್ತಂಬರಿ, ಕರಿಬೇವು ಸ್ವಲ್ಪ
* ಸೋಡಾ 1/2 ಟೀ ಚಮಚ
* ಗೋಡಂಬಿ ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಚು
 
   ತಯಾರಿಸುವ ವಿಧಾನ:
  ಮೊದಲು ಬಾಣಲೆಯಲ್ಲಿ ಒಟ್ಸ್ ಅನ್ನು ಹಾಕಿ 2 ರಿಂದ 3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಬೇಕು. ಅದನ್ನು ಆರಲು ಬಿಡಬೇಕು. ನಂತರ ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೇಬೇಳೆ, ಸಣ್ಣದಾಗಿ ಹೆಚ್ಚಿದ ಕರಿಬೇವನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಈಗಾಗಲೇ ತುರಿದುಕೊಂಡ ಕ್ಯಾರೆಟ್ ಅನ್ನು ಹಾಕಿ ಹುರಿಯಬೇಕು. ನಂತರ ಚಿರೋಟ್ ರವೆಯನ್ನು ಸೇರಿಸಿ ಕೆಂಬಣ್ಣ ಬರುವವರೆಗೆ ಹುರಿದುಕೊಂಡು ಒಲೆಯನ್ನು ಆರಿಸಬೇಕು.

ಹುರಿದ ಪದಾರ್ಥಗಳು ಆರಿದ ನಂತರ ಓಟ್ಸ್, ಮೊಸರು, ಉಪ್ಪು, ನೀರು, ಕೊತ್ತಂಬರಿ ಸೊಪ್ಪು, ಸೋಡಾವನ್ನು ಹಾಕಿ ಮಿಶ್ರಣ ಮಾಡಬೇಕು. ಅದನ್ನು ಕಾಲು ಗಂಟೆ ಹಾಗೆಯೇ ಮುಚ್ಚಿಡಬೇಕು. ನಂತರ ಇಡ್ಲಿ ತಟ್ಟೆಗೆ ತುಪ್ಪವನ್ನು ಸವರಿ ಒಂದೊಂದು ಗೋಡಂಬಿಯನ್ನು ಅದರಲ್ಲಿ ಇಡಬೇಕು. ನಂತರ ಕಲೆಸಿಕೊಂಡ ಹಿಟ್ಟನ್ನು ಹಾಕುತ್ತಾ ಬರಬೇಕು. ನಂತರ ಅದನ್ನು ಇಡ್ಲಿ ಕುಕ್ಕರ್‌ನಲ್ಲಿಟ್ಟು ಮುಚ್ಚಿಟ್ಟು ಬೇಯಿಸಬೇಕು. ಕಾಲು ಗಂಟೆ ಬಿಟ್ಟರೆ ಇಡ್ಲಿ ಬೆಂದಿರುತ್ತದೆ. ನಂತರ ಈ ಇಡ್ಲಿಗೆ ತೆಂಗಿನಕಾಯಿ ಚಟ್ನಿ, ಅಲೂಗಡ್ಡೆ ಸಾಗುವಿನೊಂದಿಗೆ ಸವಿಯಸು ರುಚಿಯಾಗಿರುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ