ಬೆಂಗಳೂರು :ಚಿಕನ್ ಬಿರಿಯಾನಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಮನೆಯಲ್ಲಿಯೇ ರುಚಿಯಾದ ಚಿಕನ್ ಬಿರಿಯಾನಿ ತಯಾರಿಸಿ.
ಬೇಕಾಗುವ ಸಾಮಾಗ್ರಿಗಳು : ಚಿಕನ್ ½ ಕೆ.ಜಿ, ಅಕ್ಕಿ-2 ಲೋಟ, ಮೊಸರು ½ ಕಪ್, ಕೆಂಪು ಮೆಣಸಿನ ಪುಡಿ-1 ಚಮಚ, ಗರಂ ಮಸಾಲಾ ½ ಚಮಚ, ದನಿಯಾ ಪುಡಿ- ½ ಚಮಚ,, ಜೀರಿಗೆ ¼ ಚಮಚ, ಚಕ್ಕೆ ಅರ್ಧ ಪೀಸ್, ಚಕ್ರ ಮೊಗ್ಗು-1, ಜಾಪತ್ರೆ-ಒಂದು ಸಣ್ಣ ಚೂರು, ಏಲಕ್ಕಿ-2, ಲವಂಗ-1, ಈರುಳ್ಳಿ ಒಂದು ದೊಡ್ಡದ್ದು, ಟೊಮೆಟೊ-1, ಉಪ್ಪು ರುಚಿಗೆ ತಕ್ಕಷ್ಟು, ಲಿಂಬೆ ರಸ-1 ಚಮಚ, ಬಿರಿಯಾನಿ ಮಸಾಲ ½ ಚಮಚ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್-2 ಚಮಚ, ಪಲಾವ್ ಎಲೆ-1. ಹಸಿಮೆಣಸು-3.
ಮಾಡುವ ವಿಧಾನ : ಮೊದಲಿಗೆ ಚಿಕನ್ ಗೆ ಅರ್ಧ ಚಮಚ ಖಾರದ ಪುಡಿ, ಅರ್ಧ ಚಮಚ ಗರಂ ಮಸಾಲಾ, ಧನಿಯಾ ಪುಡಿ, ಜೀರಿಗೆ ಪುಡಿ, ಮೊಸರು, ಲಿಂಬೆ ರಸ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 1 ಗಂಟೆಗಳ ಕಾಲ ಇಡಿ. ಬಳಿಕ ಕುಕ್ಕರ್ ಗೆ ತುಪ್ಪ, ಎಣ್ಣೆ ಹಾಕಿ ಪಲಾವ್ ಎಲೆ, ಮೊಗ್ಗು, ಚಕ್ಕೆ, ಏಲಕ್ಕಿ, ಲವಂಗ, ಜಾಪತ್ರೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಈರುಳ್ಳಿ, ಟೊಮೆಟೊ, ಹಸಿಮೆಣಸು ಉಪ್ಪು, , ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಹಾಕಿ ಫ್ರೈ ಮಾಡಿ. ಚಿಕನ್ ಹಾಕಿ ಬೇಯಿಸಿ. ನಂತರ ಅಕ್ಕಿ ಅದಕ್ಕೆ ಅಕ್ಕಿಯ ಎರಡರಷ್ಟು ನೀರು ಸೇರಿಸಿ ಕುಕ್ಕರ್ ಮುಚ್ಚಳ ಎರಡು ವಿಷಲ್ ಬರಿಸಿದರೆ ಚಿಕನ್ ಬಿರಿಯಾನಿ ರೆಡಿ.