ಪಾಸ್ತಾ ಸೂಪ್ ಮಾಡುವುದು ಹೇಗೆ ಗೊತ್ತಾ?

ಶನಿವಾರ, 25 ಜುಲೈ 2020 (08:52 IST)
Normal 0 false false false EN-US X-NONE X-NONE

ಬೆಂಗಳೂರು : ಪಾಸ್ತಾದಿಂದ ಹಲವು ಬಗೆಯ ಅಡುಗೆಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಬಹಳ ರುಚಿಕರವಾದ ರೆಸಿಪಿ ಎಂದರೆ ಪಾಸ್ತಾ ಸೂಪ್. ಇದನ್ನು ಒಮ್ಮೆ ಮಾಡಿ ಸವಿದು ನೋಡಿ.
 

ಬೇಕಾಗುವ ಸಾಮಾಗ್ರಿಗಳು : ಪಾಸ್ತಾ ½ ಕಪ್, ಪಾಸ್ತಾ ಸಾಸ್ 1 ಕಪ್, ಟೊಮೆಟೊ ಸಾಸ್ 1 ಕಪ್, ಚೆನ್ನಾ( ದೊಡ್ಡ ಕಡಲೆ) 3 ಚಮಚ, ತರಕಾರಿ(ಕ್ಯಾರೆಟ್, ಬೀನ್ಸ್) ¼ ಕಪ್, ಸ್ವಲ್ಪ ದೊಡ್ಡ ಪತ್ರೆ, ಜೋಳದ ಹಿಟ್ಟು 1 ಚಮಚ, ಚಿಕ್ಕದಾದ ಈರುಳ್ಳಿ 1, ಬೆಳ್ಳುಳ್ಳಿ ಎಸಳು 4, ಎಣ್ಣೆ 2 ಚಮಚ, ನೀರು ¼ ಕಪ್, ರುಚಿಗೆ ತಕಷ್ಟು ಉಪ್ಪು.

ಮಾಡುವ ವಿಧಾನ : ಮೊದಲಿಗೆ ಕಡಲೆಯನ್ನು 4-5 ಗಂಟೆಗಳ ಕಾಲ ನೆನೆಸಿಟ್ಟು, ನಂತರ ಅದನ್ನು ತರಕಾರಿಗಳ ಜೊತೆಗೆ ಬೇಯಿಸಬೇಕು. ಇನ್ನೊಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ  ಅದು ಕುದಿದ ನಂತರ  ಅದಕ್ಕೆ ಪಾಸ್ತಾವನ್ನುಹಾಕಿ ಬೇಯಿಸಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ ನಂತರ ಬೇಯಿಸಿಟ್ಟುಕೊಂಡ ತರಕಾರಿ ಹಾಗೂ ಕಡಲೆ, ಪಾಸ್ತಾ ಸಾಸ್, ಟೊಮೆಟೊ ಸಾಸ್ ಹಾಗೂ ದೊಡ್ಡ ಪತ್ರೆ ಹಾಕಿ ಬೇಯಿಸಿ. ಆಮೇಲೆ ಅದಕ್ಕೆ ನೀರು ಹಾಗೂ ಬೇಯಿಸಿದ ಪಾಸ್ತಾ, ಉಪ್ಪು, ಜೋಳದ ಹಿಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ 3-4 ನಿಮಿಷ ಬೇಯಿಸಿದರೆ ಪಾಸ್ತಾ ಸೂಪ್ ರೆಡಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ