ಬೆಂಗಳೂರು : ದೇಹ ತುಂಬಾ ಹೀಟಾದಾಗ ಸೌತೆಕಾಯಿ ಇಡ್ಲಿ ತಯಾರಿಸಿ ತಿನ್ನಿ ಇದರಿಂದ ದೇಹ ತಂಪಾಗುತ್ತದೆ.
ಬೇಕಾಗುವ ಸಾಮಾಗ್ರಿಗಳು : ತುರಿದ ಸೌತೆಕಾಯಿ 3 ಕಪ್, 1 ಕಪ್ ರವಾ, ½ ತೆಂಗಿನಕಾಯಿ, 4 ಹಸಿಮೆಣಸಿನ ಕಾಯಿ, ½ ಚಮಚ ಶುಂಠಿ, 2 ಚಮಚ ಕೊತ್ತಂಬರಿಸೊಪ್ಪು, ಉಪ್ಪು, 1 ಚಮಚ ಎಣ್ಣೆ, ½ ಚಮಚ ಸಾಸಿವೆ, 1 ಚಮಚ ಜೀರಿಗೆ, ಚಿಟಿಕೆ ಇಂಗು.
ಮಾಡುವ ವಿಧಾನ : ತುರಿದ ಸೌತೆಕಾಯಿ, ರವಾ, ತೆಂಗಿನಕಾಯಿ, ಉಪ್ಪು ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ½ ಗಂಟೆ ಹಾಗೇ ಇಡಿ. ಬಳಿಕ ಇದಕ್ಕೆ ಕೊತ್ತಂಬರಿಸೊಪ್ಪು, ಶುಂಠಿ, ಹಸಿಮೆಣಸಿನ ಕಾಯಿ ಹಾಕಿ ಮಿಕ್ಸ್ ಮಾಡಿ. ಬಳಿಕ ಅದಕ್ಕೆ ಎಣ್ಣೆ, ಸಾಸಿವೆ, ಜಿರಿಗೆ, ಇಂಗಿನ ಒಗ್ಗರಣೆ ಹಾಕಿ ಇಡ್ಲಿ ಮಾಡುವ ರೀತಿಯಲ್ಲೇ 20 ನಿಮಿಷ ಬೇಯಿಸಿ ದರೆ ಸೌತೆಕಾಯಿ ಇಡ್ಲಿ ರೆಡಿ.