ಹೆಸರುಬೇಳೆ ಹಲ್ವಾ

ಮಂಗಳವಾರ, 18 ಆಗಸ್ಟ್ 2020 (08:06 IST)
ಬೆಂಗಳೂರು : ಹೆಸರು ಬೇಳೆಯನ್ನು ಹಲವು ಸಿಹಿ ತಿಂಡಿಗಳನ್ನು ಬಳಸುತ್ತಾರೆ. ಇದರಿಂದ ಹಲ್ವಾ ಕೂಡ ತಯಾರಿಸಬಹುದು. ಇದನ್ನು ಮಕ್ಕಳು ಇಷ್ಟಪಡುತ್ತಾರೆ.

ಬೇಕಾಗುವ ಸಾಮಾಗ್ರಿಗಳು : ½ ಕಪ್ ಹೆಸರುಬೇಳೆ, ½ ಕಪ್ ತುಪ್ಪ, 1 ಚಮಚ ಒಣದ್ರಾಕ್ಷಿ, 10 ಬಾದಾಮಿ, 10 ಗೋಡಂಬಿ, ½ ಕಪ್ ಸಕ್ಕರೆ, 1 ಕಪ್ ಹಾಲು, ¼ ಚಮಚ ಏಲಕ್ಕಿ ಪುಡಿ, 1 ಕಪ್ ನೀರು.

ಮಾಡುವ ವಿಧಾನ : ಹೆಸರುಬೇಳೆಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಬಳಿಕ ಅದನ್ನು ರುಬ್ಬಿ ಪೇಸ್ಟ್ ತಯಾರಿಸಿ. ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಒಣದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಹುರಿದು ತೆಗೆದಿಡಿ. ಬಳಿಕ ಅದಕ್ಕೆ ಹೆಸರುಬೇಳೆ ಪೇಸ್ಟ್ ಹಾಕಿ ಚೆನ್ನಾಗಿ ಪ್ರೈ ಮಾಡಿ. ಬಳಿಕ ಅದಕ್ಕೆ ನೀರು ಹಾಕಿ ಕುದಿಸಿ. ಆಮೇಲೆ  ಸಕ್ಕರೆ ಮತ್ತು ಹಾಲು ಸೇರಿಸಿ ಹಲ್ವಾದ ಪಾಕ ಬರುವವರೆಗೂ ಕುದಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿದರೆ ಹೆಸರುಬೇಳೆ ಹಲ್ವಾ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ