* ಎಣ್ಣೆ
* ಚಿಟಿಕೆಯಷ್ಟು ಉಪ್ಪು
ತಯಾರಿಸುವ ವಿಧಾನ :
ಮೊದಲು ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಬಿಸಿ ಮಾಡಿದ ತುಪ್ಪ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಬಿಸಿ ಹಾಲನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಹಿಟ್ಟನ್ನು ಚೆನ್ನಾಗಿ ನಾದಿ ಹಿಟ್ಟನ್ನು ಅರ್ಧ ಗಂಟೆ ಹಾಗೆಯೇ ಮುಚ್ಚಿಡಬೇಕು. ನಂತರ ಬಾದಾಮಿ, ಗೋಡಂಬಿ, ದ್ರಾಕ್ಷಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ನಂತರ ಒಂದು ಬೌಲ್‌ನಲ್ಲಿ ಸಕ್ಕರೆಪುಡಿ, ಕೊಬ್ಬರಿತುರಿ, ಗಸಗಸೆ, ತುಂಡರಿಸಿಕೊಂಡ ಬಾದಾಮಿ, ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಬೇಕು.
ನಂತರ ಕಲೆಸಿಕೊಂಡ ಹಿಟ್ಟನ್ನು ಚೆನ್ನಾಗಿ ನಾದಿ ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ ಚಪಾತಿ ಲಟ್ಟಿಸುವಂತೆ ಲಟ್ಟಿಸಬೇಕು. ನಂತರ ಅದನ್ನು ವೃತ್ತಾಕಾರವನ್ನಾಗಿ ಮಾಡಿ ಲಟ್ಟಿಸಿಕೊಂಡ ಹಿಟ್ಟಿನ ಮಧ್ಯಭಾಗದಲ್ಲಿ ತಯಾರಿಸಿಕೊಂಡ ಹೂರಣವನ್ನು ಹಾಕಿ ಮಡಚಿ ಅಂಚಿನ ಕೊನೆಗೆ ಹಾಲನ್ನು ಸವರಿ ನಿಧಾನವಾಗಿ ಒತ್ತುತ್ತಾ ಬರಬೇಕು. ನಂತರ ತಯಾರಿಸಿಕೊಂಡ ಖರ್ಜಿಕಾಯಿಯನ್ನು ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದರೆ ರುಚಿರುಚಿಯಾದ ಖರ್ಜಿಕಾಯಿ ಸವಿಯಲು ಸಿದ್ಧ. (ಖರ್ಜಿಕಾಯಿ ಅಚ್ಚನ್ನೂ ಸಹ ಉಪಯೋಗಿಸಿ ತಯಾರಿಸಬಹುದು.)