ಪನೀರ್ ಸ್ಯಾಂಡ್‌ವಿಚ್

ಸೋಮವಾರ, 12 ನವೆಂಬರ್ 2018 (13:32 IST)
ಬೇಕಾಗುವ ಸಾಮಗ್ರಿಗಳು :
 
* ಪನೀರ್ 200 ಗ್ರಾಂ
* ಎಲೆಕೋಸು 1 ಕಪ್
* ಕ್ಯಾಪ್ಸಿಕಂ 1 ಕಪ್
* ಈರುಳ್ಳಿ 1 ಕಪ್
* ಚಾಟ್ ಮಸಾಲೆ 1 ಟೀ ಚಮಚ
* ಕಾಳು ಮೆಣಸಿನ ಪುಡಿ 1/2 ಟೀ ಚಮಚ
* ಬೆಣ್ಣೆ ಸ್ವಲ್ಪ
* ಸೀಸನಿಂಗ್ ಪೌಡರ್ (ಬೇಕಿದ್ದರೆ)
* ಸ್ಯಾಂಡ್‌ವಿಚ್ ಬ್ರೆಡ್
* ಉಪ್ಪು ರುಚಿಗೆ ತಕ್ಕಷ್ಟು
 
ತಯಾರಿಸುವ ವಿಧಾನ :
 
ಮೊದಲು ತರಕಾರಿಗಳೆಲ್ಲವನ್ನೂ ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಪನೀರ್ ಅನ್ನು ಪುಡಿ ಮಾಡಿಟ್ಟುಕೊಳ್ಳಬೇಕು. ಒಂದು ಪಾತ್ರೆಯನ್ನು ತೆಗೆದುಕೊಂಡು ಎಲ್ಲವನ್ನೂ ಮಿಶ್ರಣ ಮಾಡಿ ಆ ಮಿಶ್ರಣಕ್ಕೆ ಚಾಟ್ ಮಸಾಲೆ, ಉಪ್ಪು, ಕಾಳು ಮೆಣಸಿನ ಪುಡಿ, (ಬೇಕಿದ್ದರೆ ಸೀಸನಿಂಗ್ ಪೌಡರ್) ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಬ್ರೆಡ್‌ನ ಒಂದು ಭಾಗಕ್ಕೆ ಹಸಿರು ಚಟ್ನಿ ಹಾಕಿ ತರಕಾರಿಗಳನ್ನು ಅದರ ಮೇಲೆ ಹಾಕಬೇಕು.

ಇನ್ನೊಂದು ಬ್ರೆಡ್‌ನ ಒಂದು ಭಾಗಕ್ಕೆ ಬೆಣ್ಣೆಯನ್ನು ಹಾಕಿ ಎರಡನ್ನೂ ಗಟ್ಟಿಯಾಗಿ ಮುಚ್ಚಬೇಕು. ನಂತರ ಎರಡೂ ಕಡೆಗೆ ಬೆಣ್ಣೆಯನ್ನು ಹಾಕಿ ಸ್ಯಾಂಡ್‌ವಿಟ್ ಮೇಕರ್‌ನಲ್ಲಿ ಟೋಸ್ಟ್ ಮಾಡಿ ಗರಿಗರಿಯಾಗಿ ಬೇಯಿಸಿದರೆ ಪನೀರ್ ಸ್ಯಾಂಡ್‌ವಿಚ್ ಸವಿಯಲು ಸಿದ್ಧ. ಅದನ್ನು ಟೊಮೆಟೊ ಸಾಸ್ ಅಥವಾ ಚಟ್ನಿಯೊಂದಿಗೆ ಸವಿಯಬಹುದು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ