ನಿಂಬೆ ರಸ - 1/2 ಚಮಚ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ 11/2 ಕಪ್ ಅಕ್ಕಿ, 1/2 ಕಪ್ ಉದ್ದಿನಬೇಳೆ, 2 ಚಮಚ ಕಡಲೆ ಬೇಳೆ, 2 ಚಮಚ ತೊಗರಿ ಬೇಳೆ, 1 ಚಮಚ ಮೆಂತೆ, 1/2 ಕಪ್ ನೆನೆಸಿಟ್ಟ ಅವಲಕ್ಕಿ ಮತ್ತು ನೀರನ್ನು ಸೇರಿಸಿ 4-6 ಗಂಟೆಗಳಕಾಲ ನೆನೆಸಿಡಿ. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಂಡು 8 ಗಂಟೆ ಮುಚ್ಚಿಡಿ.
ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸಾಸಿವೆ, ಜೀರಿಗೆ, 1/2 ಚಮಚ ಕಡಲೆ ಬೇಳೆ, 1/2 ಚಮಚ ಉದ್ದಿನ ಬೇಳೆ, ಸ್ವಲ್ಪ ಕರಿಬೇವು, ಒಂದು ಕೆಂಪು ಮೆಣಸು ಮತ್ತು ಚಿಟಿಕೆ ಇಂಗನ್ನು ಸೇರಿಸಿ 1 ನಿಮಿಷ ಹುರಿದು ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು 1/2 ಇಂಚು ಶುಂಠಿಯನ್ನು ಸೇರಿಸಿ ಇನ್ನೊಮ್ಮೆ ಹುರಿಯಿರಿ. ಈರುಳ್ಳಿ ಹುರಿದು ಕೆಂಪಾದಾಗ ಅದಕ್ಕೆ 1/2 ಚಮಚ ಅರಿಶಿಣ ಮತ್ತು ಉಪ್ಪನ್ನು ಸೇರಿಸಿ ಇನ್ನೊಮ್ಮೆ ಮಿಕ್ಸ್ ಮಾಡಿ. ಈಗ ಇದಕ್ಕೆ ಬೇಯಿಸಿ ಸ್ಮ್ಯಾಶ್ ಮಾಡಿದ ಬಟಾಟೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿ. ನಂತರ ಈ ಮಿಶ್ರಣಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು 1/2 ಚಮಚ ನಿಂಬೆರಸವನ್ನು ಸೇರಿಸಿಟ್ಟುಕೊಳ್ಳಿ.
ಈಗ ಇನ್ನೊಂದು ತವಾ ತೆಗೆದುಕೊಂಡು ಅದರಲ್ಲಿ 2 ಚಮಚ ಎಣ್ಣೆ ಮತ್ತು 2 ಚಮಚ ಕಡಲೆ ಬೇಳೆಯನ್ನು ಹಾಕಿ 2 ನಿಮಿಷ ಹುರಿಯಿರಿ. ಈಗ ಅದಕ್ಕೆ 1/2 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, ಮತ್ತು ಚೆನ್ನಾಗಿ ಹೆಚ್ಚಿದ 1/2 ಈರುಳ್ಳಯನ್ನು ಸೇರಿಸಿ 1 ನಿಮಿಷ ಹುರಿದು ಅದಕ್ಕೆ 1/2 ಚಮಚ ಅರಿಶಿಣ ಮತ್ತು 4 ಕೆಂಪು ಮೆಣಸನ್ನು ಸೇರಿಸಿ 2 ನಿಮಿಷ ಹುರಿದು ಸ್ಟೌ ಆಫ್ ಮಾಡಿ. ಈ ಹುರಿದ ಮಸಾಲೆಯು ತಣ್ಣಗಾದಮೇಲೆ ಮಿಕ್ಸಿ ಜಾರ್‌ನಲ್ಲಿ ಹಾಕಿ ಸ್ವಲ್ಪ ನೀರು ಮತ್ತು ಉಪ್ಪನ್ನು ಸೇರಿಸಿ ರುಬ್ಬಿಕೊಂಡರೆ ಕೆಂಪು ಚಟ್ನಿ ರೆಡಿಯಾಗುತ್ತದೆ.
ಈಗ ದೋಸೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ದೋಸೆ ತವಾದ ಮೇಲೆ ಒಂದು ಹುಟ್ಟು ಹಿಟ್ಟನ್ನು ಹಾಕಿ ಹರಡಿ ಮಧ್ಯಮ ಉರಿಯಲ್ಲಿ ಬೇಯಿಸಿ. ಈ ದೋಸೆಯ ಮೇಲೆ ಒಂದು ಚಮಚ ಬೆಣ್ಣೆ ಮತ್ತು 1 ಚಮಚ ಕೆಂಪು ಚಟ್ನಿಯನ್ನು ಹಾಕಿ ಅದನ್ನು ಹರಡಿ. ಅದರ ಮೇಲೆ ಈಗಾಗಲೇ ಮಾಡಿಟ್ಟುಕೊಂಡಿರುವ ಮಸಾಲಾವನ್ನು ಹಾಕಿ ಫೋಲ್ಡ್ ಮಾಡಿದರೆ ಮೈಸೂರು ಮಸಾಲಾ ದೋಸಾ ಸಿದ್ಧವಾಗುತ್ತದೆ.