ಮದ್ದೂರು ವಡೆ

ಸೋಮವಾರ, 15 ಅಕ್ಟೋಬರ್ 2018 (16:46 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 * 250 ಗ್ರಾಂ ಮೈದಾ
* 250 ಗ್ರಾಂ ಸಣ್ಣ ರವೆ
* 100 ಗ್ರಾಂ ಬೆಣ್ಣೆ ಅಥವಾ ತುಪ್ಪ
* 4 ಈರುಳ್ಳಿ
* ಹಸಿಮೆಣಸಿನಕಾಯಿ
* ಉಪ್ಪು
* ಕರಿಬೇವು
* ಇಂಗು
 
ತಯಾರಿಸುವ ವಿಧಾನ :
   ಮೊದಲು ಬೆಣ್ಣೆಯನ್ನು ಹಿಟ್ಟುಗಳ ಜೊತೆ ಚೆನ್ನಾಗಿ ಕಲೆಸಬೇಕು. (ಅಂದರೆ ಅದು ಬ್ರೆಡ್ ಪುಡಿಯಂತೆ ಕಾಣಿಸಬೇಕು) ನಂತರ ಎಣ್ಣೆಯನ್ನು ಕಾಯಲು ಇಟ್ಟು ಈರುಳ್ಳಿಯನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಅದಕ್ಕೆ ಉಪ್ಪು, ಇಂಗು, ಕರಿಬೇವು, ಹಾಕಿ ಹಿಟ್ಟಿನ ಜೊತೆ ಕಲೆಸಬೇಕು. ನಂತರ ಪ್ಲಾಸ್ಟಿಕ್ ಪೇಪರ್ ನಡುವೆ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಮದ್ದೂರು ವಡೆ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ