ಬೆಂಗಳೂರು : ದೋಸೆಗಳನ್ನು ತಿನ್ನಲು ಹೆಚ್ಚಿನವರು ಇಷ್ಟಪಡುತ್ತಾರೆ. ಅದು ನಿಮ್ಮ ನಾಲಿಗೆಯ ರುಚಿಯನ್ನು ಸಹ ಹೆಚ್ಚಿಸುತ್ತದೆ. ಆದರೆ ಒಂದೇ ತರಹದ ದೋಸೆಗಳನ್ನು ತಿನ್ನತಿದ್ದರೆ ಬೇಜಾರಾಗಬಹುದು. ಅದಕ್ಕೆ ಟೊಮೆಟೊ ದೋಸೆ ಮಾಡಿ.
ಮಾಡುವ ವಿಧಾನ : ಅಕ್ಕಿ, ಅವಲಕ್ಕಿ, ಕಡಲೆಬೇಳೆ, ಉದ್ದಿನ ಬೇಳೆಯನ್ನು ತೆಗೆದುಕೊಂಡು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ನಂತರ ಚೆನ್ನಾಗಿ ತೊಳೆದು ರುಬ್ಬಿ 8-9 ಗಂಟೆಗಳ ಕಾಲ ಹಾಗೇ ಇಡಿ. ದೋಸೆ ಮಾಡುವ ಅರ್ಧ ಗಂಟೆ ಮೊದಲು ಟೊಮೆಟೊ, ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ ಒಟ್ಟಿಗೆ ಸೇರಿಸಿ ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿ. ನಂತರ ಅದನ್ನು ದೋಸೆ ಹಿಟ್ಟಿಗೆ ಹಾಕಿ ಆಮೇಲೆ ಅದಕ್ಕೆ ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕಾದ ತವಾದ ಮೇಲೆ ದೋಸೆ ಮಾಡಿರಿ.