ಎರಿಯಪ್ಪ ಮಾಡುವುದು ಹೇಗೆ ಎಂಬುದು ತಿಳಿದಿದೆಯೇ?

ಬುಧವಾರ, 13 ಮಾರ್ಚ್ 2019 (14:22 IST)
ವಿಶೇಷ ಸಂದರ್ಭಗಳಲ್ಲಿ ನಾವು ಮೊದಲು ಗಮನಹರಿಸುವುದು ಸಿಹಿ ತಿಂಡಿಗಳ ಬಗೆಗೆ. ಯಾವ ಸಿಹಿ ತಿಂಡಿಗಳನ್ನು ಮಾಡಿದರೆ ಚೆನ್ನ ಎಂದು. ಅದರಲ್ಲಿಯೂ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಬಹಳ ಪ್ರಿಯವೆನಿಸುತ್ತವೆ. ಈ ಎರಿಯಪ್ಪವೂ ಹಾಗೆಯೇ ವಿಶೇಷ ಸಂದರ್ಭಗಳಲ್ಲಿ ಮಾಡಿವ ತಿಂಡಿಗಳ ಪಟ್ಟಿಗೆ ಸೇರುತ್ತದೆ. ಹಾಗಾದರೆ ಎರಿಯಪ್ಪವನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.. 
   
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಅಕ್ಕಿ 1 ಲೋಟ
* ಮೆಂತ್ಯೆ 1 ಟೀ ಚಮಚ
* ಉದ್ದಿನಬೇಳೆ 1 ಹಿಡಿ
* ತೆಂಗಿನಕಾಯಿ ತುರಿ 1/2 ಕಪ್
* ಬೆಲ್ಲದ ಪುಡಿ 3 ಅಥವಾ 4 ಕಪ್
* ಕರಿಯಲು ಎಣ್ಣೆ
* ನೀರು ಸ್ವಲ್ಪ
 
    ತಯಾರಿಸುವ ವಿಧಾನ:
   ಮೊದಲು 1 ಲೋಟ ಅಕ್ಕಿಯನ್ನು ತೆಗೆದುಕೊಂಡು ಅದಕ್ಕೆ 1 ಟೀ ಚಮಚದಷ್ಟು ಮೆಂತ್ಯೆಯನ್ನು ಹಾಕಿ ಅದರ ಜೊತೆ 1 ಹಿಡಿಯಷ್ಟು ಉದ್ದಿನಬೇಳೆಯನ್ನು ಹಾಕಿ 1 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಅದಕ್ಕೆ /2 ತೆಂಗಿನಕಾಯಿ ತುರಿಯನ್ನು ಮತ್ತು 3/4 ಲೋಟದಷ್ಟು ಬೆಲ್ಲದ ಪುಡಿಯನ್ನು ತಯಾರು ಮಾಡಿಟ್ಟುಕೊಳ್ಳಬೇಕು. ನಂತರ ಈಗಾಗಲೇ ನೆನಸಿಟ್ಟ ಅಕ್ಕಿ, ಮೆಂತ್ಯ, ಉದ್ದಿನಬೇಳೆಯ ಜೊತೆ ತುರಿದಿಟ್ಟ ತೆಂಗಿನಕಾಯಿ ತುರಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬುವಾಗ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು. ಸ್ವಲ್ಪ ನುಣ್ಣಗಾಗುತ್ತಿರುವಾಗ ಬೆಲ್ಲದ ಪುಡಿಯನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಬೇಕು. ಅದು ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಒಂದು ಸಣ್ಣ ಸೌಟಿನಲ್ಲಿ ಹಿಟ್ಟನ್ನು ತೆಗೆದುಕೊಂಡು ಅದು ಹೊಂಬಣ್ಣ ಬರುವವರೆಗೂ ಕಾಯಿಸಬೇಕು. ನಂತರ ಸೌಟಿನಿಂದ ನಿದಾನವಾಗಿ ಒತ್ತಿ ತೆಗೆದರೆ ರುಚಿಕರವಾದ ಎರಿಯಪ್ಪ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ