ಮನೆಯಲ್ಲೇ ಫ್ರೂಟ್ ಸಲಾಡ್ ಮಾಡಿಕೊಂಡು ತಿನ್ನಿ

ಶುಕ್ರವಾರ, 13 ಜನವರಿ 2017 (14:49 IST)
ಬೆಂಗಳೂರು: ಫ್ರೂಟ್ ಸಲಾಡ್ ಮಾಡಲು ಐಸ್ ಕ್ರೀಂ ಪಾರ್ಲರ್ ಗೇ ಹೋಗಬೇಕೆಂದೇನಿಲ್ಲ. ಮನೆಯಲ್ಲೇ ಆರೋಗ್ಯಕರ ಫ್ರೂಟ್ ಸಲಾಡ್ ಮಾಡಿ ಬೇಕಾದಷ್ಟು ತಿಂದು ಖುಷಿಪಡಿ. ಮಾಡುವ ವಿಧಾನ ಇಲ್ಲಿದೆ.

 
ಬೇಕಾಗುವ ಸಾಮಗ್ರಿಗಳು


ಮಿಶ್ರ ಹಣ್ಣುಗಳು
ಐಸ್ ಕ್ರೀಂ

ಮಾಡುವ ವಿಧಾನ

ಸೇಬು, ದ್ರಾಕ್ಷಿ,  ಪೈನಾಪಲ್, ಕಿತ್ತಳೆ, ಮೂಸುಂಬಿ ಹಣ್ಣುಗಳ ಮಿಶ್ರಣವನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದನ್ನು ಒಂದು ಪಾತ್ರೆಯಲ್ಲಿ ಒಲೆಯ ಮೇಲಿರಿಸಿ ಎರಡು ಕುದಿ ಕುದಿಸಿ. ನಂತರ ಆರಿದ ಮೇಲೆ ತಂಪಾಗಲು ಫ್ರಿಜ್ ನಲ್ಲಿಡಿ. ನಂತರ ಇದಕ್ಕೆ ಐಸ್ ಕ್ರೀಂ ಸೇರಿಸಿಕೊಂಡು ತಿಂದರೆ ಫ್ರೂಟ್ ಸಲಾಡ್ ರೆಡಿ. ಐಸ್ ಕ್ರೀಂ ಕೂಡಾ ಮನೆಯಲ್ಲೇ ತಯಾರಿಸುವಂತಹ ರೆಡಿ ಪೌಡರ್ ಗಳು ಈಗ ಅಂಗಡಿಗಳಲ್ಲಿ ಲಭ್ಯವಿರುತ್ತದಲ್ಲವೇ? ಆ ರೀತಿ ಐಸ್ ಕ್ರೀಂ ಮಾಡಿಕೊಳ್ಳಬಹುದು. ಅಥವಾ ಐಸ್ ಕ್ರೀಂ ತಂದು ಹಣ್ಣುಗಳ ಮಿಶ್ರಣಕ್ಕೆ ಸೇರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ