ಚೈನೀಸ್ ಫುಡ್ ಸೇವಿಸುವಾಗ ಹೀಗೆ ಮಾಡಲೇಬೇಡಿ!

ಸೋಮವಾರ, 12 ಫೆಬ್ರವರಿ 2018 (08:37 IST)
ಬೆಂಗಳೂರು: ಚೈನೀಸ್ ನೂಡಲ್ಸ್ ಗಳಿಂದ ಹಿಡಿದು, ಸೂಪ್ ವರೆಗೆ ಯಾರಿಗಿಷ್ಟವಿಲ್ಲ ಹೇಳಿ? ಹೀಗೆ ಚೈನೀಸ್ ಫುಡ್ ಸೇವಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.
 

ಗಬ ಗಬ ತಿನ್ನಬೇಡಿ
ನೂಡಲ್ಸ್ ಇರಲಿ, ಸೂಪ್ ಇರಲಿ ಒಂದೇ ಏಟಿಗೆ ಗಬ ಗಬನೆ ತಿಂದು ಮುಗಿಸಬೇಡಿ. ಈ ರೀತಿ ಮಾಡುವದು ಟೇಬಲ್ ಮ್ಯಾನರ್ಸ್ ಅಲ್ಲ!

ಫ್ರೈಡ್ ರೈಸ್ ಮೇಲೆ ಸೋಯಾ ಸಾಸ್ ಸುರಿಯಬೇಡಿ
ಚೈನಾ ರೆಸ್ಟೋರೆಂಟ್ ಗೆ ಹೋಗಿ ನಿಮ್ಮ ಆಹಾರಕ್ಕೆ ಸೋಯಾ ಸಾಸ್ ಸುರಿಯಲು ಅಡುಗೆಯವರಿಗೆ ಹೇಳಬೇಡಿ. ಅವರಿಗೆ ಗ್ರಾಹಕರಿಗೆ ತಾವು ತಯಾರಿಸಿದ ಆಹಾರ ಇಷ್ಟವಾಗಲಿಲ್ಲವೇನೋ ಎಂದು ಸಿಟ್ಟು ಬಂದರೂ ಅಚ್ಚರಿಯಿಲ್ಲ

ಚಾಪ್ ಸ್ಟಿಕ್ ಹಿಡಿಯುವ ಬಗೆ
ಚೈನೀಸ್ ಆಹಾರ ಸೇವಿಸಲು ಚಾಕ್ ಸ್ಟಿಕ್ ಬೇಕೇ ಬೇಕು. ಆದರೆ ಹಿಡಿಯುವಾಗ ಓರೆಕೋರೆ ಹಿಡಿಯಬೇಡಿ. ಚೈನೀಸ್ ನಂಬಿಕೆ ಪ್ರಕಾರ ಇದು ಸಾವನ್ನು ಸೂಚಿಸುತ್ತದೆ. ಹಾಗಾಗಿ ಒಂದಕ್ಕೊಂದು ಸಮಾನಂತರವಾಗಿ ಹಿಡಿದುಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ