ಆಂಟಿ ಬಯೋಟಿಕ್ ಸೇವಿಸುತ್ತಿದ್ದರೆ ಈ ಆಹಾರಗಳನ್ನು ಸೇವಿಸಲೇಬಾರದು!

ಬುಧವಾರ, 7 ಫೆಬ್ರವರಿ 2018 (08:23 IST)
ಬೆಂಗಳೂರು: ಆಂಟಿ ಬಯೋಟಿಕ್ ಔಷಧಗಳನ್ನು ಸೇವಿಸುವಾಗ ದೇಹ ವೀಕ್ ಅದಂತೆ ಅನಿಸುತ್ತದೆ. ಹಾಗಂತ ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸಬೇಡಿ. ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು ಗೊತ್ತಾ?
 

ನಾರಿನಂಶದ ಆಹಾರಗಳು
ನಾರಿನಂಶ ಹೆಚ್ಚು ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಇದು ಹೊಟ್ಟೆಯಿಂದ ಆಹಾರ ಹೀರಿಕೊಳ್ಳುವ ಪ್ರಕ್ರಿಯೆ ನಿಧಾನಗೊಳಿಸಬಹುದು ಇದರೊಂದಿಗೆ ಆಂಟಿ ಬಯೋಟಿಕ್ ಔಷಧವೂ ಬೇಗ ದೇಹಕ್ಕೆ ಹಿಡಿಯದು.

ಸೊಪ್ಪು ತರಕಾರಿಗಳು
ಸೊಪ್ಪು ತರಕಾರಿಗಳಲ್ಲಿರುವ ವಿಟಮಿನ್ ಕೆ ಅಂಶ ಆಂಟಿ ಬಯೋಟಿಕ್ ಔಷಧಧ ಸತ್ವ ಹೀರಲು ನಿಧಾನ ಮಾಡಬಹುದು.

ಡೈರಿ ಉತ್ಪನ್ನಗಳು
ಹಾಲು, ಮೊಸರು, ತುಪ್ಪದಂತಹ ಕೊಬ್ಬಿನಂಶವಿರುವ ಡೈರಿ ಉತ್ಪನ್ನಗಳು ಆಂಟಿ ಬಯೋಟಿಕ್ ಔಷಧ ಹೀರುವಿಕೆಗೆ ಅಡ್ಡಿಯಾಗಬಹುದು.

ಅಸಿಡಿಕ್ ಆಹಾರಗಳು
ನಿಂಬೆ ಹಣ್ಣು, ಟೊಮೆಟೊದಂತಹ ಹುಳಿಯುಕ್ತ ಆಹಾರ ಪದಾರ್ಥಗಳು ಆಂಟಿ ಬಯೋಟಿಕ್ ಆಹಾರದ ಪರಿಣಾಮ ಕುಗ್ಗಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ