ಮೊಟ್ಟೆ ಪಕೋಡಾ

ಶನಿವಾರ, 15 ನವೆಂಬರ್ 2014 (11:13 IST)
ಬೇಕಾಗುವ ಸಾಮಾನುಗಳು: ನಾಲ್ಕು ಬೇಯಿಸಿದ ಮೊಟ್ಟೆ ,ಮೂರು ಚಮಚ ಗ್ರಾಂ ಫ್ಲೋರ್, 2 ಚಿಟಿಕೆ ಕೆಂಪು ಮೆಣಸಿನ ಪುಡಿ , ಒಂದು ಚಿಟಿಕೆ ಕರಿಮೆಣಸಿನ ಪುಡಿ , ಬೇಯಿಸಲು ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
 
ಮಾಡುವ ವಿಧಾನ : ಬೇಯಿಸಿದ ಮೊಟ್ಟೆಯನ್ನು ಎರಡು ಭಾಗ ಮಾಡಿಕೊಳ್ಳಿ . ಒಂದು ಬೌಲ್‌ನಲ್ಲಿ ಗ್ರಾಂಫ್ಲೋರ್ , ಕೆಂಪು ಮೆಣಸಿನ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಮಿಕ್ಸ್ ಮಾಡಿ. ಮತ್ತು ಅದಕ್ಕೆ ನೀರನ್ನು ಸ್ವಲ್ಪ ಸ್ವಲ್ಪ ಹಾಕುತ್ತಾ ಚೆಟ್ನಿಯ ರೂಪದಲ್ಲಿ ಪೇಸ್ಟ್ ಮಾಡಿ.ಈ ಪೇಸ್ಟ್‌ನ್ನು ನಿಧಾನವಾಗಿ ತುಂಡು ಮಾಡಿದ ಮೊಟ್ಟೆಯೊಳಗೆ ಹಾಕಿ ಎಲ್ಲೆಡೆ ಪೇಸ್ಟ್ ಹರಡಿದೆಯೇ ಎಂಬುದನ್ನು ಗಮನಿಸಿ. ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ.ಎಣ್ಣೆ ಚೆನ್ನಾಗಿ ಕಾಯ್ದ ನಂತರ ಸ್ವಲ್ಪ ಪೇಸ್ಟ್ ಹಾಕಿ ನೋಡಿ. ಒಂದು ವೇಳೆ ಪೇಸ್ಟ್ ಎಣ್ಣೆಯಲ್ಲಿ ತೇಲಿದರೆ,ಎಣ್ಣೆ ಸಾಕಷ್ಟು ಬಿಸಿಯಾಗಿದೆ ಎಂದರ್ಥ. ಹೀಗಾದಲ್ಲಿ ಮಾತ್ರ ಮೊಟ್ಟೆಯ ತುಂಡುಗಳನ್ನು ಅದರಲ್ಲಿ ಹಾಕಿ . ಹೊರಗಿನ ಭಾಗ ಬಂಗಾರದ ಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ .ಅದನ್ನು ಹೊರಕ್ಕೆ ತೆಗೆದು ಪೇಪರ್ ಮೂಲಕ ಹೆಚ್ಚಿನ ಎಣ್ಣೆಯನ್ನು ತೆಗೆಯಿರಿ.ಟೊಮೆಟೊ ಚಟ್ನಿಯೊಂದಿಗೆ ಇದನ್ನು ಸವಿದರೆ ...ವಾವ್ 

ವೆಬ್ದುನಿಯಾವನ್ನು ಓದಿ