ಎಗ್ ರೋಲ್

ಗುರುವಾರ, 25 ಜನವರಿ 2018 (13:30 IST)
ಬೇಕಾಗುವ ಪದಾರ್ಥಗಳು -
4 ಮೊಟ್ಟೆ 
2 ಕಪ್ ಮೈದಾ 
1 ಈರುಳ್ಳಿ(ಚಿಕ್ಕದಾಗಿ ಹೆಚ್ಚಿದ್ದು, ಅದರ ಮೇಲೆ 1 ಚಮಚ ವಿನೆಗರ್ ಹಾಕಿಡಿ) 
ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ 2-3 
1 ಚಮಚ ಖಾರದ ಪುಡಿ 
ಟೊಮೆಟೊ ಸಾಸ್ 
ಚಿಲ್ಲಿ ಸಾಸ್ 
ನಿಂಬೆ ರಸ 
ಸೌತೆಕಾಯಿ
ಎಣ್ಣೆ 
ಉಪ್ಪು 
ಮಾಡುವ ವಿಧಾನ- 
 
* ಮೈದಾಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಪರೋಟದ ಹದಕ್ಕೆ ಕಲೆಸಿ. ನಂತರ ಅದರಿಂದ ಮೀಡಿಯಂ ಗಾತ್ರದ ಉಂಡೆಗಳನ್ನು ಮಾಡಿ, ಪರೋಟಕ್ಕೆ ತಟ್ಟಿದಂತೆ ತಟ್ಟಿ. 
 
* ಈಗ ಬಟ್ಟಲಿಗೆ ಮೊಟ್ಟೆ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕದಡಿ. 
 
* ಮತ್ತೊಂದು ಪಾತ್ರೆಯಲ್ಲಿ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಸೌತೆಕಾಯಿ, ಟೊಮೆಟೊ ಸಾಸ್ . ಚಿಲ್ಲಿ ಸಾಸ್ ಮತ್ತು ನಿಂಬೆ ರಸ ಹಾಕಿ ಮಿಕ್ಸ್ ಮಾಡಿ 
 
* ನಂತರ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ ಪರೋಟದ ಎರಡೂ ಬದಿಯನ್ನು ಬೇಯಿಸಿ. 
 
* ನಂತರ ಅದೇ ತವಾಕ್ಕೆ ಸ್ವಲ್ಪ ಎಣ್ಣೆ ಹಾಕಿ ಆಮ್ಲೇಟ್ ಮಾಡಿ, ಆಮ್ಲೇಟ್ ಬಿಸಿಯಾಗಿರುವಾಗಲೇ ಅದನ್ನು ಬೇಯಿಸಿದ ಪರೋಟದ ಮೇಲೆ ಹಾಕಿ, ಮತ್ತೆ ತವಾದ ಮೇಲೆ 2-1 ನಿಮಿಷ ಬಿಸಿ ಮಾಡಿ, ಈಗ ಆಮ್ಲೇಟ್ ಇರುವ ಕಡೆ ಸಾಸ್ ಮಿಕ್ಸ್ ಮಾಡಿರುವ ತರಕಾರಿ ಹಾಕಿ, ಖಾರದ ಪುಡಿ ಚಿಮುಕಿಸಿ, ರೋಲ್ ರೀತಿ ಮಾಡಿದರೆ ಎಗ್ ರೋಲ್ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ