ಆಹಾರದಲ್ಲಿ ಶುಂಠಿ ಬಳಸುವುದರಿಂದ ಅದರ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಆರೋಗ್ಯ ಮತ್ತು ಸೌಂದರ್ಯದ ಮೇಲೂ ಉತ್ತಮ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಚಳಿಗಾಲದಲ್ಲಂತೂ ಇದರ ಸೇವನೆಯಿಂದ ಬಹಳಷ್ಟು ಲಾಭಗಳನ್ನು ಪಡೆಯಬಹುದು
- ಒಂದು ಲೋಟ ನೀರಿಗೆ ಸ್ವಲ್ಪ ಶುಂಠಿ ಹಾಕಿ ಕುದಿಸಿ ಅದಕ್ಕೆ ,ಒಂದು ಚಮಚ ಜೇನು ತುಪ್ಪ ಹಾಕಿ ಕುಡಿಯುವುದರಿಂದ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಶೀತ-ನೆಗಡಿಯ ಸಮಸ್ಯೆ ಇರುವುದಿಲ್ಲ.
- ಊಟ ಮಾಡುವುದಕ್ಕೂ ಮುನ್ನ ಸಣ್ಣ ತುಂಡು ಶುಂಠಿಯನ್ನು ಜಗಿದು ಸೇವಿಸಿದರೆ ಹಸಿವು ಹೆಚ್ಚಾಗುವುದು.
- ಪ್ರಯಾಣಕ್ಕೆ ಮೊದಲು ಒಂದು ಲೋಟ ಶುಂಠಿ ಟೀ ಕುಡಿದರೆ ವಾಕರಿಕೆ ಮತ್ತು ವಾಂತಿ ತಡೆಗಟ್ಟಲು ಸಹಾಯ ಮಾಡುತ್ತದೆ
- ಅರ್ಧ ಚಮಚ ಶುಂಠಿ ರಸ, 1/4 ಚಮಚ ಕರಿಮೆಣಸಿನ ಪುಡಿ, ಚಿಟಿಕೆಯಷ್ಟು ಉಪ್ಪು, ಸ್ವಲ್ಪ ಜೇನು ತುಪ್ಪ ಮಿಶ್ರಣ ಮಾಡಿ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುಂಚೆ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.
- ಗಂಟು ನೋವು ಉಳ್ಳವರು ಕೂಡ ಸಣ್ಣ ತುಂಡು ಶುಂಠಿಯನ್ನು ಸೇವಿಸಿದರೆ ನೋವು ಕಡಿಮೆಯಾಗುವುದು.
- ಅಜೀರ್ಣ ಸಮಸ್ಯೆ ಉಳ್ಳವರು ಸ್ವಲ್ಪ ಹಸಿ ಶುಂಠಿಯನ್ನು ಜಗಿದು ತಿಂದರೆ ಅಜೀರ್ಣ ಮಾಯವಾಗುತ್ತದೆ.
- ಪರಿಸರದ ಅಲರ್ಜಿ ಸಂಬಂಧಿಸಿದ ಉಸಿರಾಟದ ತೊಂದರೆ ಉಳ್ಳವರು ಒಂದು ಕಪ್ ಶುಂಠಿ ಚಹಾ ಕುಡಿದರೆ ಸಾಕು.