ಮೆಂತ್ಯ ಹುರಿದ ಮೊಟ್ಟೆಗಳು

ಶನಿವಾರ, 15 ನವೆಂಬರ್ 2014 (17:16 IST)
ಬೇಕಾಗುವ ಸಾಮಾನುಗಳು 6 ಹಸಿ ಮೊಟ್ಟೆಗಳು ,1 ಕಟ್ಟು ಮೆಂತ್ಯ ಸೊಪ್ಪು,ತೊಳೆದ ಮತ್ತು ಕೊಚ್ಚಿದ 1 ಟೀ ಚಮಚ ಮೆಣಸಿನ ಪುಡಿ, ಅರ್ಧ ಟೀ ಚಮಚ ಮೆಣಸಿನ ಪುಡಿ, ಅರ್ಧ ಟೀ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಚಮಚ ಗರಂ ಮಸಾಲೆ ಪುಡಿ,ಅರ್ಧ ಟೀ ಚಮಚ ಜೀರಿಗೆ ಪುಡಿ, ಅಗತ್ಯಕ್ಕೆ ತಕ್ಕಂತೆ ಅರಿಶಿನ 2 ಚಮಚೆ ಎಣ್ಣೆ 1 ಚಮಚ ಉಪ್ಪು 1 ಮಧ್ಯಮ ಗಾತ್ರದ ಈರುಳ್ಳಿ-ಕತ್ತರಿಸಿದ
 
ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಎಣ್ಣೆಕಾಯಿಸಿ, ಈರುಳ್ಳಿ ಕತ್ತರಿಸಿದ್ದು, ಸೇರಿಸಿ 3 ನಿಮಿಷ ಹುರಿಯಿರಿ. 3 ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಕಲಕಿ ಮತ್ತು ಒಂದು ನಿಮಿಷ ಹುರಿಯಿರಿ.ಕೊಚ್ಚಿದ ಮೆಂತ್ಯ ಸೊಪ್ಪು ಸೇರಿಸಿ ಚೆನ್ನಾಗಿ ಕಲಕಿ ಮತ್ತೆ 3 ನಿಮಿಷ ಹುರಿಯಿರಿ. ನಂತರ ಜೀರಿಗೆ ಪುಡಿ, ಮೆಣಸಿನ ಪುಡಿ,ಅರಿಶಿನ ಸೇರಿಸಿ 1 ನಿಮಿಷ ಹುರಿಯಿರಿ.ಒಡೆದ ಹಸಿ ಮೊಟ್ಟೆಗಳಲ್ಲಿ ಸುರುವಿ ಉಪ್ಪು ಸೇರಿಸಿ ಗೊಟಾಯಿಸಿ. ಹರಂ ಮಸಾಲೆ ಪುಡಿ ಉದುರಿಸಿ 30 ನಿಮಿಷ ಮೇಲೆ ಕೆಳಗೆ ಮಾಡಿ ಮೇಲೋಗರವಾಗಿ ತಿನ್ನಲು ಕೊಡಿ.

ವೆಬ್ದುನಿಯಾವನ್ನು ಓದಿ