ರುಚಿಕರವಾದ ಹಸಿ ಬಟಾಣಿ ಸಾರು

ಶನಿವಾರ, 1 ಆಗಸ್ಟ್ 2020 (09:18 IST)
ಬೆಂಗಳೂರು : ಬಟಾಣಿ ಒಂದು ರುಚಿಕರವಾದ ಧಾನ್ಯ. ಇದನ್ನು ಹಾಕಿ ಮಾಡಿದ ಯಾವುದೇ ಸಾಂಬಾರು, ತಿಂಡಿ ಏನೆ ಇರಲಿ ಅದು ರುಚಿಕರವಾಗಿಯೇ ಇರುತ್ತದೆ. ಇಂತಹ ರುಚಿಕರವಾಗ ಬಟಾಣಿಯಿಂದ ಸಾಂಬಾರು ಮಾಡುವುದು ಹೇಗೆಂದು ನೋಡೋಣ.

ಬೇಕಾಗುವ ಸಾಮಾಗ್ರಿಗಳು : ಹಸಿ ಬಟಾಣಿ 1 ಕಪ್, ದೊಡ್ಡದಾದ ಈರುಳ್ಳಿ 1, 4 ಬೆಳ್ಳುಳ್ಳಿ ಎಸಳು, ಶುಂಠಿ  ಸ್ವಲ್ಪ, ಹಸಿ ಮೆಣಸಿನಕಾಯಿ 2, ಟೊಮೆಟೊ 1, ಆಲೂಗಡ್ಡೆ 2, ಅರಿಶಿನ ಪುಡಿ 1 /2 ಚಮಚ, ದನಿಯಾ ಪುಡಿ 1 ಚಮಚ, ಜೀರಿಗೆ ½ ಚಮಚ, ಕಾಳು ಮೆಣಸಿನ ಪುಡಿ ½ ಚಮಚ, ಗರಂ ಮಸಾಲ ಪುಡಿ ½ ಚಮಚ, ಸಾಸಿವೆ ½ ಚಮಚ, ಮೆಣಸಿನ ಕಾಯಿ 2, ಸ್ವಲ್ಪ ಕರಿ ಬೇವು, ಇಂಗು ಸ್ವಲ್ಪ,  ಎಣ್ಣೆ 2 ಚಮಚ, ಸಕ್ಕರೆ ½ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮಾಡಯವ ವಿಧಾನ : ಮೊದಲಿಗೆ ಹಸಿ ಬಟಾಣಿಯನ್ನು ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಪುಡಿ, ಕಾಳು ಮೆಣಸಿನ ಪುಡಿ ಇವಿಷ್ಟನ್ನು ಹಾಕಿ ನುಣ್ಣನೆ ರುಬ್ಬಿಕೊಳ್ಳಿ. ಆಮೇಲೆ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಆಲೂಗಡ್ಡೆ ಹುರಿದುಕೊಳ್ಳಿ. ನಂತರ ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಕರಿಬೇವಿನ ಎಲೆ, ಇಂಗು, ಟೊಮೆಟೊ ಹಾಕಿ ಹುರಿಯಿರಿ. ಅದಕ್ಕೆ  ರುಬ್ಬಿದ ಮಸಾಲೆ, ರುಬ್ಬಿದ ಬಟಾಣಿ, ಉಪ್ಪು, ಅರಶಿನ, ನೀರು ಸೇರಿಸಿ ಚೆನ್ನಾಗಿ ಕುದಿಸಿರಿ. ನಂತರ ಅದಕ್ಕೆ ಆಲೂಗಡ್ಡೆ ಮತ್ತು ಗರಂ ಮಸಾಲ ಹಾಕಿ 8-10 ನಿಮಿಷ ಬೇಯಿಸಿ. ಅದಕ್ಕೆ ಸಕ್ಕರೆ ಹಾಕಿ 2 ನಿಮಿಷ ಬೇಯಿಸಿದರೆ ರುಚಿಕರವಾದ ರುಬ್ಬಿದ ಹಸಿ ಬಟಾಣಿ ಸಾರು ರೆಡಿ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ