ಬೆಂಗಳೂರು : ಪಿತ್ತದ ಸಮಸ್ಯೆ ಇರುವವರು ಈ ಹೆರಳೆ ಉಪ್ಪಿನಕಾಯಿಯನ್ನು ಸೇವಿಸಿದರೆ ತುಂಬಾ ಉತ್ತಮ. ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು : 6 ಹೆರಳೆಕಾಯಿ, 1 ಕಪ್ ಪುಡಿ ಉಪ್ಪು, ¼ ಚಮಚ ಸಾಸಿವೆ, ¼ ಚಮಚ ಜೀರಿಗೆ, 10 -15 ಕಾಳು ಮೆಂತ್ಯ, ಸ್ವಲ್ಪ ಇಂಗು, 2 ಗಡ್ಡೆ ಬೆಳ್ಳುಳ್ಳಿ, 20 ಬ್ಯಾಡಗಿ ಮೆಣಸಿನಕಾಯಿ, 15 ಗುಂಟೂರು ಮೆಣಸಿನಕಾಯಿ.
ಮಾಡುವ ವಿಧಾನ : 6 ಹೆರಳೆಕಾಯಿಯನ್ನು ಕಟ್ ಮಾಡಿಕೊಳ್ಳಿ. ಅದಕ್ಕೆ 1 ಕಪ್ ಪುಡಿ ಉಪ್ಪನ್ನು ಮಿಕ್ಸ್ ಮಾಡಿ 2 ದಿನ ಹಾಗೆ ಇಡಿ.
ಬಳಿಕ ¼ ಚಮಚ ಸಾಸಿವೆ, ¼ ಚಮಚ ಜೀರಿಗೆ, 10 -15 ಕಾಳು ಮೆಂತ್ಯ, ಸ್ವಲ್ಪ ಇಂಗು, 2 ಗಡ್ಡೆ ಬೆಳ್ಳುಳ್ಳಿ, 20 ಬ್ಯಾಡಗಿ ಮೆಣಸಿನಕಾಯಿ, 15 ಗುಂಟೂರು ಮೆಣಸಿನಕಾಯಿ ಇವಿಷ್ಟು ಪದಾರ್ಥವನ್ನು ಮಿಕ್ಸಿಯಲ್ಲಿ ಹಾಕಿ ಹೆರಳೆಕಾಯಿ ನೆನೆಹಾಕಿದ ಉಪ್ಪು ನೀರನ್ನು ಹಾಕಿ ರುಬ್ಬಿ, ಬಳಿಕ ಹಿರಳಿಕಾಯಿ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಎಣ್ಣೆ ಸಾಸಿವೆ ಹಾಕಿದ ಒಗ್ಗರಣೆ ಮಿಕ್ಸ್ ಮಾಡಿದರೆ ಹೆರಳೆಕಾಯಿ ಉಪ್ಪಿನ ಕಾಯಿ ರೆಡಿ.