ಕ್ರಿಸ್‍ಮಸ್‍ ಆಚರಣೆಗೆ ಮನೆಯಲ್ಲಿಯೇ ಮಾಡಿ ಕೇಕ್!

ಶನಿವಾರ, 25 ಡಿಸೆಂಬರ್ 2021 (11:58 IST)
ಕ್ರಿಸ್‍ಮಸ್‍ಗೆ ಮನೆಯಲ್ಲೇ ಸಿಂಪಲ್ ಆಗಿ ಕೇಕ್ ಮಾಡೋದು ಹೇಗೆ ಅಂತ ಯೋಚನೆ ಮಾಡ್ತಿದ್ದೀರಾ?

ಮನೆಯಲ್ಲಿ ಕೇಕ್ ತಯಾರಿಸೋಕೆ ಓವನ್ ಇಲ್ಲ, ಬೇಕರಿಯಿಂದ ತರೋದು ಸೇಫ್ ಅಲ್ಲ ಅಂತ ಯೋಚನೆ ಮಾಡ್ತಾ ಇರ್ತಿರಾ ಅಲ್ವಾ?

ಈಗ ಅದರ ಚಿಂತೆ ಬಿಡಿ, ಓವನ್ ಇಲ್ಲದೆಯೇ ಮನೆಯಲ್ಲಿಯೇ ರವೆಯಿಂದ ಕೇಕ್ ಹೇಗೆ ಮಾಡೋದು ಅಂತ ನಾವು ನಿಮಗೆ ಹೇಳಿಕೊಡ್ತೀವಿ.

ಬೇಕಾಗುವ ಸಾಮಗ್ರಿಗಳು

* ರವೆ-2 ಕಪ್
* ಅಡುಗೆ ಎಣ್ಣೆ- ಅರ್ಧ ಕಪ್
* ಮೊಸರು -1 ಕಪ್
* ಸಕ್ಕರೆ -2 ಕಪ್
* ಹಾಲು- 1 ಕಪ್
* ಉಪ್ಪು- ಸ್ವಲ್ಪ
* ಬೇಕಿಂಗ್ ಪೇಪರ್
* ಅಡುಗೆ ಸೋಡಾ- ಸ್ವಲ್ಪ
* ಏಲಕ್ಕಿ ಪುಡಿ – ಸ್ವಲ್ಪ
* ಮೊಟ್ಟೆ -1
* ಡ್ರೈ ಫ್ರೂಟ್ಸ್ ಅಗತ್ಯವಿರುವಷ್ಟು
* ಬೇಕಿಂಗ್ ಪೌಡರ್

ಮಾಡುವ ವಿಧಾನ

* ಮೊದಲನೆಯದಾಗಿ ಮಿಕ್ಸಿ ಜಾರ್ನಲ್ಲಿ ರವೆ ಹಾಕಿ, ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು.

* ಒಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ, ಮೊಸರು, ಸಕ್ಕರೆ, ಹಾಲು ಸೇರಿಸಿ ಮಿಶ್ರಣ ಮಾಡಿ.

* ನಂತರ ಈ ಮಿಶ್ರಣಕ್ಕೆ ಪುಡಿ ಮಾಡಿದ ರವೆ, ಸ್ವಲ್ಪ ಉಪ್ಪು, ಮೊಟ್ಟೆ, ಡ್ರೈ ಫ್ರೂಟ್ಸ್ ಸೇರಿಸಿ 10 ನಿಮಿಷ ಹಾಗೇ ಇಟ್ಟಿರಬೇಕು.

* 10 ನಿಮಿಷಗಳ ಕಾಲ ನೆನೆಸಿದ ರವೆ ಮಿಶ್ರಣಕ್ಕೆ ಬೇಕಿಂಗ್ ಪೌಡರ್, ಅಡುಗೆ ಸೋಡಾ, ಏಲಕ್ಕಿ ಪುಡಿ, ಹಾಲು ಸೇರಿಸಿ ಚೆನ್ನಾಗಿ ಬೆರೆಸಿ.

* ಕುಕ್ಕರ್ಗೆ ಅಡುಗೆ ಎಣ್ಣೆ ಸವರಿಕೊಂಡು ಬೇಕಿಂಗ್ ಪೇಪರ್ ಹಾಕಿ ರೆಡಿ ಮಾಡಿ. ನಂತರ ಮಿಶ್ರಣವನ್ನು ಪಾತ್ರೆಗೆ ಹಾಕಿ ಸಣ್ಣ ಉರಿ ಬೆಂಕಿಯಲ್ಲಿ ವಿಶಿಲ್ ಕೂಗಿಸದೇ ಸ್ವಲ್ಪ ಹೊತ್ತು ಬೇಯಿಸಿದರೆ ರುಚಿಯಾದ ಕೇಕ್ ಸವಿಯಲು ಸಿದ್ಧವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ