ಹಲಸಿನಕಾಯಿಯಿಂದ ರೋಸ್ಟ್ ಆಗಿ ದೋಸೆ ಮಾಡಲು ಹೀಗೆ ಮಾಡಿ!

ಶನಿವಾರ, 9 ಮೇ 2020 (08:40 IST)
ಬೆಂಗಳೂರು: ಮಲೆನಾಡು, ಕರಾವಳಿ ಕಡೆಗೆ ಹೋದರೆ ಈ ಸೀಸನ್ ನಲ್ಲಿ ಹಲಸಿನಕಾಯಿ ದೋಸೆ ಸಾಮಾನ್ಯ ತಿಂಡಿ. ಆದರೆ ಬೆಂಗಳೂರು, ಕರ್ನಾಟಕದ ಉತ್ತರ ಭಾಗದ ಜನರಿಗೆ ಹಲಸಿನಕಾಯಿ ದೋಸೆ ಅಷ್ಟೊಂದು ಪರಿಚಿತವಾಗಿರುವುದಿಲ್ಲ. ಹಲಸಿನ ಕಾಯಿಯ ತೊಳೆ ಬಳಸಿ ಗರಿ ಗರಿಯಾಗಿ ದೋಸೆ ಮಾಡುವುದು ಹೇಗೆ ಇಲ್ಲಿ ನೋಡಿ.

 

ಬೇಕಾಗಿರುವ ಸಾಮಾನು
ಚೆನ್ನಾಗಿ ಬಲಿತ ಹಲಸಿನ ಕಾಯಿ
ದೋಸೆ ಅಕ್ಕಿ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಹಲಸಿನ ಕಾಯಿಯನ್ನು ಅದರ ಬೇಳೆ, ಹೊರಗಿನ ಕಸ ಎಲ್ಲಾ ತೆಗೆದು ಕತ್ತರಿಸಿಕೊಳ್ಳಿ. ದೋಸೆ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆ ಹಾಕಿ ತೀರಾ ನುಣ್ಣಗೆ ಅಲ್ಲದಿದ್ದರೂ ಹದವಾಗಿ ರುಬ್ಬಿಕೊಳ್ಳಿ. ಬಳಿಕ ಅಷ್ಟೇ ಪಾಲು ಕತ್ತರಿಸಿದ ಹಲಸಿನಕಾಯಿ ತೊಳೆಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಬಳಿಕ ಕಾದ ತವಾಗೆ ಹೆಚ್ಚು ಎಣ್ಣೆ ಬಳಸದೇ ದೋಸೆ ಹುಯ್ದುಕೊಳ್ಳಿ. ಇದಕ್ಕೆ ಜೇನು ತುಪ್ಪ ಬೆರೆಸಿ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ