ಬೆಂಗಳೂರು: ಸಾಕಷ್ಟು ಕಬ್ಬಿಣಾಂಶವಿರುವ ಸಪೋಟ ಹಣ್ಣಿನ ಸೇವನೆಯಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಇದರಿಂದ ಬಗೆಬಗೆಯ ತಿನಿಸುಗಳನ್ನು ಮಾಡಬಹುದು. ಸಪೋಟಾ ಕುಲ್ಫಿ ಮಾಡುವ ಬಗೆ ಇಲ್ಲಿದೆ ನೋಡಿ.
ಸಪೋಟಾ ಕುಲ್ಫಿ
ಬೇಕಾಗುವ ಸಾಮಗ್ರಿ: ಸಪೋಟಾ - ನಾಲ್ಕು, ಬಾಳೆಹಣ್ಣು- ಒಂದು, ಖರ್ಜೂರ - ಎರಡು, ಗೋಡಂಬಿ ತರಿ - ಎರಡು ಚಮಚ, ಹಾಲು - ಎರಡು ಕಪ್, ಸಕ್ಕರೆ ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಮಿಕ್ಸಿಜಾರಿಗೆ ಸಪೋಟಾ, ಬಾಳೆಹಣ್ಣು, ಹಾಲು ಮತ್ತು ಸಕ್ಕರೆ ಸೇರಿಸಿ ರುಬ್ಬಿ. ನಂತರ ಇದಕ್ಕೆ ಹೆಚ್ಚಿದ ಖರ್ಜೂರ ಮತ್ತು ಗೋಡಂಬಿ ತರಿ ಸೇರಿಸಿ ಕುಲ್ಫಿ ಮೋಡ್‌ಗೆ ಸುರಿದು ಗಟ್ಟಿಯಾಗಿಸಿದರೆ ಕುಲ್ಫಿ ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ