ವಿಷಯುಕ್ತ ತರಕಾರಿ ತೊಳೆಯುವುದು ಹೇಗೆ?

ಬುಧವಾರ, 28 ಜೂನ್ 2017 (11:39 IST)
ಬೆಂಗಳೂರು: ಇಂದಿನ ಕಾಲದಲ್ಲಿ ಶುದ್ಧ ತರಕಾರಿ ಸಿಗುವುದು ಕನಸಿನ ಮಾತು. ಆದಷ್ಟು ತೊಳೆದು ತಿನ್ನುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ತರಕಾರಿಗಳನ್ನು ತೊಳೆಯುವುದು ಹೇಗೆ ಎಂದು ನೋಡೋಣ.

 
ಉಪ್ಪು ಮತ್ತು ಅರಸಿನ ಹುಡಿ
ಉಪ್ಪು ಮತ್ತು ಅರಸಿನ ಹುಡಿಯಲ್ಲಿ ವಿಷ ತೆಗೆಯುವ ಸಾಮರ್ಥ್ಯವಿದೆ. ಹಾಗಾಗಿ ತರಕಾರಿಗಳನ್ನು ತಂದ ಕೂಡಲೇ ಉಪ್ಪು ಮತ್ತು ಕೊಂಚ ಅರಸಿನ ಪುಡಿ ಹಾಕಿದ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಟ್ಟು ನಂತರ ತೊಳೆದು ಉಪಯೋಗಿಸಿ.

ನಿಂಬೆ ಹಣ್ಣು
ನಿಂಬೆ ಹಣ್ಣು, ಬೇಕಿಂಗ್ ಸೋಡಾ ಮತ್ತು ನೀರು ಮಿಶ್ರಣ ಮಾಡಿದ ದ್ರಾವಣ ಮಾಡಿ ತರಕಾರಿಗೆ ಸ್ಪ್ರೇ ಮಾಡಿ ತೊಳೆದುಕೊಳ್ಳಿ. ಇದರಿಂದ ವಿಷ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.

ಕುದಿಯುವ ನೀರು
ಕುದಿಯುವ ನೀರಿನಲ್ಲಿ ತರಕಾರಿಯನ್ನು ನೆನೆಸಿಟ್ಟ ನಂತರ ಐದು ನಿಮಿಷದ ನಂತರ ಹೊರ ತೆಗೆದು ಬಳಸಿಕೊಳ್ಳಿ.

ಸಿಪ್ಪೆ ತೆಗೆಯುವುದು
ಆಪಲ್ ನಂತಹ ಹಣ್ಣುಗಳ ಸಿಪ್ಪೆಯಲ್ಲಿ ಅಧಿಕ ವಿಷಕಾರಿ ಅಂಶವಿರುತ್ತದೆ ಎನ್ನಲಾಗುತ್ತದೆ. ಹೀಗಾಗಿ ಇಂತಹ ಹಣ್ಣುಗಳನ್ನು ಉಪಯೋಗಿಸುವ ಮೊದಲು ಸಿಪ್ಪೆ ತೆಗೆಯುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ