ಕೇರಳ ಚಿಕನ್ ಫ್ರೈ ರೆಸಿಪಿ

ಬುಧವಾರ, 10 ಅಕ್ಟೋಬರ್ 2018 (15:16 IST)
ಕೇರಳದ ಮಾಂಸದಡುಗೆಗಳು ಸಾಕಷ್ಟು ಜನಪ್ರಿಯವಾಗಿದ್ದು ಅದರ ರುಚಿಯಿಂದಲೇ ಅಂತಾ ಹೇಳಬಹುದು. ನೀವು ಸಹ ಮಾಂಸ ಪ್ರೀಯರಾಗಿದ್ದಲ್ಲಿ ನಿಮಗೂ ಬೇರೆ ಬೇರೆ ಶೈಲಿಯ ಮಾಂಸದಡುಗೆಯನ್ನು ಮಾಡಿ ಸವಿಯಬೇಕು ಎಂದು ಬಯಸುತ್ತಿದ್ದಲ್ಲಿ, ಸರಳವಾಗಿ ತಯಾರಿಸಬಹುದಾದ ಕೇರಳ ಚಿಕನ್ ಫ್ರೈ ಉತ್ತಮ ಆಯ್ಕೆ ಎನ್ನಬಹುದು.
ಬೇಕಾಗುವ ಸಾಮಗ್ರಿ:
 
ಕೋಳಿ ಮಾಂಸ - 1/2 ಕೆ.ಜಿ
ಜೀರಿಗೆ ಪುಡಿ = 2 ಟೇಬಲ್ ಸ್ಪೂನ್
ಕೆಂಪು ಮೆಣಸಿನ ಕಾಯಿ- 5-6 (ಚಿಕ್ಕದಾಗಿ ಕತ್ತರಿಸಿರುವುದು)
ಬೆಳ್ಳುಳ್ಳಿ - 6-7 ತುಂಡುಗಳು
ಕರಿ ಬೇವು
ಉಪ್ಪು 
 
ಮಾಡುವ ವಿಧಾನ
 
ಜೀರಿಗೆ ಪುಡಿ, ಕೆಂಪು ಮೆಣಸಿನ ಕಾಯಿ, ಬೆಳ್ಳುಳ್ಳಿ, ಉಪ್ಪು ಮತ್ತು ಕರಿ ಬೇವುಗಳನ್ನು ಸ್ವಲ್ಪ ನೀರಿನ ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಿ, ಅದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಿ. ನಂತರ ಈ ಪೇಸ್ಟಿನಲ್ಲಿ ಕೋಳಿ ಮಾಂಸವನ್ನು ಚೆನ್ನಾಗಿ ಅದ್ದಿ, ನೆನೆಸಿ. ತದನಂತರ ಒಂದು ಗಂಟೆಯವರೆಗೆ ಇದನ್ನು ನೆನೆಯಲು ಬಿಡಿ. ಈ ಮಸಾಲೆಯು ಚೆನ್ನಾಗಿ ಕೋಳಿ ಮಾಂಸಕ್ಕೆ ಹಿಡಿದ ಮೇಲೆ ಅದನ್ನು ತೆಂಗಿನ ಕಾಯಿ ಎಣ್ಣೆಯಲ್ಲಿ ಕರಿಬೇವಿನ ಎಲೆಗಳನ್ನು ಹಾಕಿರಿ ತದನಂತರ ಮಾಂಸವನ್ನು ಹಾಕಿ 10 ನಿಮಿಷಗಳ ಕಾಲ ಹೊಂಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿಕೊಂಡರೆ, ರುಚಿ ರುಚಿಯಾದ ಕೇರಳ ಚಿಕನ್ ಫ್ರೈ ತಿನ್ನಲು ರೆಡಿ!
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ