ಹಬ್ಬಕ್ಕೆ ಮಾಡಿ ಈ ಸಿಹಿತಿಂಡಿ

ಗುರುವಾರ, 19 ಆಗಸ್ಟ್ 2021 (10:20 IST)
ಸಿಹಿ ತಿನಿಸು ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ? ಅದರಲ್ಲು ಹಬ್ಬ ಆಚರಣೆಗಳು ಬಂದಿತೆಂದರೆ ಮಹಿಳೆಯರಿಗೆ ಸಂಭ್ರಮ ಹೇಳತೀರದು. ಹಬ್ಬಕ್ಕೆ ಬೇಕಾದ ತಯಾರಿಯಲ್ಲಿ ಮುಳುಗುತ್ತಾರೆ. ವರಮಹಾಲಕ್ಷ್ಮಿ ಹಬ್ಬ ಎಂದರೆ ಮಹಿಳೆಯರ ಹಬ್ಬ ಎಂದರ್ಥ ಈ ಹಬ್ಬಕ್ಕೆ ವಿಶೇಷವಾಗಿ ಬಾದೂಷಾ ಸಿಹಿ ತಿನಿಸು ತಯಾರಿಸಿ. 

ಬೇಕಾಗುವ ಸಾಮಾಗ್ರಿಗಳು:
ಮೈದಾ ಹಿಟ್ಟು - 250 ಗ್ರಾಂ, ಸಕ್ಕರೆ - 200 ಗ್ರಾಂ, ತುಪ್ಪ - 1/4 ಕಪ್, ಏಲಕ್ಕಿ - ಸ್ವಲ್ಪ, ಮೊಸರು - 2 ಟೀ ಸ್ಪೂನ್, ಅಡುಗೆ ಸೋಡಾ-ಚಿಟಿಕೆ, ಕರಿಯಲು ಎಣ್ಣೆ, ಲಿಂಬೆರಸ- ಸ್ವಲ್ಪ.
ಮಾಡುವ ವಿಧಾನ: ಒಂದು ಪಾತ್ರೆಗೆ ಸಕ್ಕರೆ ಹಾಕಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಒಂದೆಳೆ ಪಾಕ ಬರುವಷ್ಟು ಕುದಿಸಿ. ನಂತರ ಈ ಸಕ್ಕರೆ ಪಾಕಕ್ಕೆ 5 ಹನಿಗಳಷ್ಟು ನಿಂಬೆರಸ ಸೇರಿಸಿ. ಇನ್ನೊಂದು ಪಾತ್ರೆಗೆ ತುಪ್ಪ ಹಾಗೂ ಚಿಟಿಕೆ ಸೋಡಾ, ಮೊಸರು ಹಾಕಿ.
ನಂತರ ಮೈದಾ ಹಿಟ್ಟು ಹಾಕಿ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಸ್ವಲ್ಪ ಸ್ವಲ್ಪನೇ ನೀರು ಹಾಕಿ ಕಲಸಿಕೊಳ್ಳಿ. 5 ನಿಮಿಷ ಚೆನ್ನಾಗಿ ನಾದಿಕೊಳ್ಳಿ. ನಂತರ ಒಂದು ಚಿಕ್ಕ ಉಂಡೆ ತೆಗೆದುಕೊಂಡು ಬೆರಳಿನಿಂದ ಮಧ್ಯಕ್ಕೆ ಒತ್ತಿ ಬಿಸಿ ಎಣ್ಣೆಯಲ್ಲಿ ಕರಿಯಿರಿ. ಚೆನ್ನಾಗಿ ಕರಿದ ಬಾದೂಷವನ್ನು ಸಕ್ಕರೆ ಪಾಕಕ್ಕೆ ಹಾಕಿ 20 ನಿಮಿಷ ಹಾಗೆಯೇ ಬಿಡಿ. ನಂತರ ಸರ್ವಿಂಗ್ ಪ್ಲೇಟ್ ಗೆ ವರ್ಗಾಯಿಸಿದರೆ ಸವಿಯಲು ಬಾದೂಷಾ ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ