ಮೆಂತೆ ಸೊಪ್ಪಿನ ದೋಸೆ

ಸೋಮವಾರ, 8 ಅಕ್ಟೋಬರ್ 2018 (14:15 IST)
ಶೀಘ್ರದಲ್ಲಿ ಬೆಳಗಿನ ತಿಂಡಿಯನ್ನು ಸಿದ್ಧಪಡಿಸುವುದು ಕಷ್ಟಕರವಾಗಿದೆಯೇ ನಿಮಗಾಗಿ ತ್ವರಿತವಾಗಿ ರುಚಿಕರವಾದ ತಿಂಡಿಗಳನ್ನು ಮಾಡಿ ತಿನ್ನಬೇಕು ಎಂದು ಆಸೆಯಾಗಿದೆಯೇ ಹಾಗಿದ್ದರೆ ನೀವು ಒಮ್ಮೆ ಮೆಂತೆ ಸೊಪ್ಪಿನ ದೋಸೆಯನ್ನು ಟ್ರೈ ಮಾಡಲೇಬೇಕು ಇದು ಆರೋಗ್ಯಕ್ಕೂ ಉತ್ತಮವಾಗಿದ್ದು ಸರಳವಾಗಿ ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ಉತ್ತಮ ತಿನಿಸಾಗಿದೆ
ಬೇಕಾಗುವ ಸಾಮಗ್ರಿಗಳು 
ಮೆಂತೆ ಸೊಪ್ಪು ಒಂದು ಕಟ್ಟು
ದೋಸೆ ಅಕ್ಕಿ- 1 ಕಪ್‌
ಉದ್ದಿನ ಬೇಳೆ- ಕಾಲು ಕಪ್‌
ಉಪ್ಪು - ಸ್ವಲ್ಪ
ಸಕ್ಕರೆ - ಒಂದು ಚಮಚ
ಎಣ್ಣೆ
 
ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಉದ್ದನ್ನು ಬೇರೆ ಬೇರೆಯಾಗಿ ನೆನೆಹಾಕಿಕೊಳ್ಳಿ. 5 ಗಂಟೆಗಳ ಅನಂತರ ನೆನೆಹಾಕಿದ ಅಕ್ಕಿ ಮತ್ತು ಉದ್ದು ಸೇರಿಸಿ ಅದಕ್ಕೆ ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು ಹಾಕಿ ರುಬ್ಬಿಕೊಳ್ಳಿ. ಅದನ್ನು ಒಂದು ರಾತ್ರಿ ಹಾಗೆಯೇ ಬಿಡಿ. ಮರುದಿನ ಬೆಳಗ್ಗೆ ದೋಸೆ ಹಿಟ್ಟಿಗೆ ಬೇಕಾದಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ದೋಸೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ನಂತರ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಸವರಿ ದೋಸೆ ಹಿಟ್ಟನ್ನು ಹಾಕಿ ಅದು ಬೆಂದ ಮೇಲೆ ಎರಡೂ ಕಡೆ ಮಗುಚಿ ಗರಿಗರಿಯಾಗಿ ತೆಗೆದರೆ ಮೆಂತೆ ಸೊಪ್ಪಿನ ದೋಸೆ ಸವಿಯಲು ಸಿದ್ಧ. ಇದಕ್ಕೆ ಪುದಿನಾ ಚಟ್ನಿ ಹಾಗೂ ತೆಂಗಿನಕಾಯಿ ಚಟ್ನಿ ಉತ್ತಮ ಕಾಂಬಿನೇಶನ್ ಅಂತಲೇ ಹೇಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ