ಮ್ಯಾಕ್ಸಿಕನ್ ಬ್ರೆಡ್ ರೋಲ್

ಮಂಗಳವಾರ, 9 ಅಕ್ಟೋಬರ್ 2018 (15:59 IST)
ನಿಮಗೆ ಒಂದೇ ರೀತಿಯ ಬ್ರೆಡ್‌ಗಳಲ್ಲಿ ತಯಾರಿಸೋ ತಿನಿಸುಗಳನ್ನು ತಿಂದು ಬೇಜಾರ್ ಆಗಿದೆಯಾ, ಸ್ವಲ್ಪ ವಿಭಿನ್ನವಾಗಿರುವ ಬ್ರೆಡ್ ರೆಸಿಪಿ ತಿನ್ನಲೂ ನೀವು ಇಷ್ಟಪಟ್ಟಿರುವಿರಾ. ಹಾಗಿದ್ದೆರೆ ಮ್ಯಾಕ್ಸಿಕನ್ ಬ್ರೆಡ್ ರೋಲ್ ರೆಸಿಪಿ ಉತ್ತಮ ಆಯ್ಕೆ ಎಂದು ಹೇಳಬಹುದು ಇದು ತಿನ್ನಲು ರುಚಿಕರವಾಗಿದ್ದು ಸರಳವಾಗಿ ಮನೆಯಲ್ಲಿಯೇ ತಯಾರಿಸಬಹುದಾಗಿದೆ. ನೀವು ಒಮ್ಮೆ ಮನೆಯಲ್ಲಿ ಮಾಡಿ ಸವಿಯಬಹುದು.
ಬೇಕಾಗುವ ಪದಾರ್ಥಗಳು:
ಬ್ರೆಡ್ ಹೋಳುಗಳು (12)
ಹುರಿಯಲು ಎಣ್ಣೆ
 
ಬ್ರೆಡ್ ಮಿಶ್ರಣಕ್ಕಾಗಿ 
ಬಟರ್ 2 ಚಮಚ
ಮೈದಾ (2 ಟೀಸ್ಪೂನ್)
ಹಾಲು (1 ಕಪ್)
ಬೇಯಿಸಿದ ಸಿಹಿ ಕಾರ್ನ್ (¼ ಕಪ್)
ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ (½ ಕಪ್)
ಸಂಸ್ಕರಿಸಿದ ಚೀಸ್ (¼ ಕಪ್)
ಕೆಂಪು ಮೆಣಸಿನ ಪೌಡರ್  (1 ಚಮಚ)
ಉಪ್ಪು (ರುಚಿಗೆ)
ಟೊಮೆಟೊ ಕೆಚಪ್
 
ಮಾಡುವ ವಿಧಾನ
ಒಂದು ಪ್ಯಾನ್ ಅನ್ನು ತೆಗೆದುಕೊಂಡು ಅದರಲ್ಲಿ ಬಟರ್ ಅನ್ನು ಹಾಕಿ ಬಿಸಿಮಾಡಿ. ಸಣ್ಣ ಬೆಂಕಿಯಲ್ಲಿ ಉರಿಯನ್ನಿರಿಸಿ ಹಾಗೆಯೇ ಅದಕ್ಕೆ ಹಾಲನ್ನು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ತದನಂತರ ಅದಕ್ಕೆ ಕ್ಯಾಪ್ಸಿಕಂ, ಬೇಯಿಸಿದ ಸಿಹಿ ಕಾರ್ನ್, ಚೀಸ್, ಕೆಂಪು ಮೆಣಸಿನ ಪೌಡರ್, ಉಪ್ಪು ಎಲ್ಲವನ್ನು ಹಾಕಿ ಒಂದು ನಿಮಿಷಗಳ ಕಾಲ ಬೇಯಿಸಿ. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಇವೆಲ್ಲವನ್ನು ಇನ್ನೊಂದು ಬೌಲ್‌ನಲ್ಲಿ ತೆಗೆದಿಟ್ಟುಕೊಳ್ಳಿ.

ನಂತರ ಬ್ರೆಡ್‌ನ ಅಂಚುಗಳನ್ನು ಕತ್ತಿರಿಸಿಕೊಳ್ಳಿ ನಂತರ ಮೊದಲೇ ತಯಾರಿಸಿಕೊಂಡಿರುವ ಮಿಶ್ರಣವನ್ನು ಬ್ರೆಡ್‌ನಲ್ಲಿ ಹಾಕಿ ಅದನ್ನು ರೋಲ್ ಮಾಡಿ ನಂತರ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಅದನ್ನು ಸಿಲ್ ಮಾಡಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆ ಎಣ್ಣೆಯನ್ನು ಹಾಕಿ ಅದರಲ್ಲಿ ಈ ರೀತಿಯಾಗಿ ತಯಾರಿಸಿಕೊಂಡಿರುವ ಬ್ರೆಡ್ ರೋಲ್‌‍‌‌ಗಳನ್ನು ಹಾಕಿ ಚೆನ್ನಾಗಿ ಹುರಿದರೆ ಮ್ಯಾಕ್ಸಿಕನ್ ಬ್ರೆಡ್ ರೋಲ್ ತಿನ್ನಲು ಸಿದ್ಧವಾಗುತ್ತದೆ ಅದನ್ನು ಟೊಮೆಟೊ ಕೆಚಪ್‌ನೊಂದಿಗೆ ಸರ್ವ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ