ಮಾವಿನಕಾಯಿ ಅಪ್ಪೆಹುಳಿ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ತುಂಬಾ ಜನಪ್ರಿಯವಾದದ್ದು. ಮಾವಿನಕಾಯಿಯ ಸೀಸನ್‌ನಲ್ಲಿ ಬಹುಪಾಲು ಜನರು ಇದನ್ನು ಮಾಡಿ ಸವಿಯುತ್ತಾರೆ. ಉಪ್ಪು, ಹುಳಿ, ಖಾರದಿಂದ ಕೂಡಿರುವ ಇದು ಬಹಳ ರುಚಿಯಾಗಿರುತ್ತದೆ ಮತ್ತು ಮಾಡುವುದೂ ಸುಲಭ.
* ಒಂದು ಬಾಣಲೆಯನ್ನು ಸ್ಟ್ವೌ ಮೇಲಿಟ್ಟು 3-4 ಚಮಚ ಎಣ್ಣೆಯನ್ನು ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ನಂತರ ಅದಕ್ಕೆ ಉದ್ದಿನ ಬೇಳೆ, ಸಾಸಿವೆ, ಎಳ್ಳು, ಮೆಣಸು, ಹೆಚ್ಚಿದ ಹಸಿಮೆಣಸು, ಹೆಚ್ಚಿದ ಬೆಳ್ಳುಳ್ಳಿ, ಕರಿಬೇವು ಮತ್ತು ಇಂಗನ್ನು ಹಾಕಿ ಒಗ್ಗರಣೆಯನ್ನು ರೆಡಿ ಮಾಡಿಕೊಳ್ಳಿ.