ಪಟಾ ಪಟ್ ಅವಲಕ್ಕಿ ಇಡ್ಲಿ

ಬುಧವಾರ, 3 ಅಕ್ಟೋಬರ್ 2018 (18:23 IST)
ತುಂಬಾ ಸುಲಭವಾಗಿ, ಬೇಗನೆ ಮಾಡಬಹುದಾದ ತಿನಿಸುಗಳಲ್ಲಿ ಅವಲಕ್ಕಿ ಇಡ್ಲಿ ಕೂಡಾ ಒಂದು. ಇದು ಬ್ಯಾಚುಲರ್ ಹುಡುಗರಿಗೆ ಹೇಳಿ ಮಾಡಿಸಿದ ತಿನಿಸಾಗಿದ್ದು ಸುಲಭವಾಗಿ ಪಟ್ ಅಂತಾ ತಯಾರಿಸಬಹುದು ಜೊತೆಗೆ ಇದು ತುಂಬಾ ರುಚಿಕರವೂ ಹೌದು.
ಬೇಕಾಗುವ ಸಾಮಗ್ರಿ: 
2 ಕಪ್ ಅವಲಕ್ಕಿ
ಒಂದುವರೆ ಕಪ್ ಇಡ್ಲಿ ರವಾ
2 ಕಪ್ ಹುಳಿ ಮೊಸರು
ಚಿಟಿಕೆ ಬೇಕಿಂಗ್ ಸೋಡಾ
ನೀರು, ರುಚಿಗೆ ತಕ್ಕಷ್ಟು ಉಪ್ಪು
ಇಡ್ಲಿ ತಟ್ಟೆಗೆ ಸವರಲು ಎಣ್ಣೆ.
 
ಮಾಡುವ ವಿಧಾನ: 2 ಕಪ್ ಅವಲಕ್ಕಿಯನ್ನು 10-15 ನಿಮಿಷ ನೀರಿನಲ್ಲಿ ನೆನೆಸಿ. ಅದು ಮೆತ್ತಗಾದ ಮೇಲೆ ಚಮಚದಿಂದ ಚೆನ್ನಾಗಿ ಸ್ಮಾಶ್ ಮಾಡಿ. ತದನಂತರ ಒಂದುವರೆ ಕಪ್ ಇಡ್ಲಿ ರವೆಯನ್ನು ಬೆರೆಸಿ. ಮೊಸರನ್ನೂ ಮತ್ತು ನೀರನ್ನು ಹಾಕಿ. ಕೊನೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಗೂ ಚಿಟಿಕೆ ಬೇಕಿಂಗ್ ಸೋಡಾವನ್ನು ಬೆರೆಸಿ. ನಂತರ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆಯನ್ನು ಸವರಿ ನಂತರ ರೆಡಿ ಮಾಡಿದ ಹಿಟ್ಟನ್ನು ಹಾಕಿ ಮಧ್ಯಮ ಉರಿಯಲ್ಲಿ 8-10 ನಿಮಿಷ ಬೇಯಿಸಿ. ಗ್ಯಾಸ್ ಆಫ್ ಮಾಡಿ 5 ನಿಮಿಷ ಹಾಗೇ ಬಿಟ್ಟರೆ ಬಿಸಿ ಬಿಸಿ ಅವಲಕ್ಕಿ ಇಡ್ಲಿ ಸವಿಯಲು ಸಿದ್ಧ. ಇದಕ್ಕೆ ಕಾಯಿ ಚಟ್ನಿ ಒಳ್ಳೆ ಕಾಂಬಿನೇಷನ್ ಅಂತಾನೇ ಹೇಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ